ಕಡಿಮೆ ಬೆಲೆಗೆ ಚಪ್ಪಲಿ ಕೊಡಿಸುವ ನೆಪ – ದರೋಡೆಕೋರರ ಬಂಧನ

ಕಡಿಮೆ ಬೆಲೆಗೆ ಚಪ್ಪಲಿ ಕೊಡಿಸುವ ನೆಪ – ದರೋಡೆಕೋರರ ಬಂಧನ

ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡಕ್ಕೆ 10 ಸಾವಿರ ರೂ. ನಗದು ಬಹುಮಾನ ಘೋಷಣೆ

ದಾವಣಗೆರೆ, ಮೇ 5- ಕಡಿಮೆ ಬೆಲೆಗೆ ಚಪ್ಪಲಿ ಕೊಡಿಸುವುದಾಗಿ ಹೇಳಿ ದರೋಡೆ ಮಾಡಿದ್ದ ಐವರ ತಂಡವನ್ನು ಬಂಧಿಸಿರುವ ಪೊಲೀಸರು, ಅವರಿಂದ 10 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.

ಕೇರಳದ ವೈನಾಡ್ ಜಿಲ್ಲೆಯ ರಾಶಿಕ್ ಹಾಗೂ ಆತನ ಸ್ನೇಹಿತ ಅಭಿನೋಶನ್, ನಿಜಾಮುದ್ದೀನ್ ಅವರಿಗೆ ರಫೀಕ್ ಎಂಬ ವ್ಯಕ್ತಿ ಕಡಿಮೆ ದರದಲ್ಲಿ ಕಂಪನಿಯಿಂದ ನೇರವಾಗಿ ಚಪ್ಪಲಿ ಕೊಡಿಸುವುದಾಗಿ ನಂಬಿಸಿದ್ದ.

ದಾವಣಗೆರೆಯ ಬಾಡಾ ಕ್ರಾಸ್ ಬಳಿ ಆತನನ್ನು ಕರೆಯಿಸಿಕೊಂಡು ರಫೀಕ್ ಹಾಗೂ ಆತನ ಐವರು ಸಹಚರರು ಹಲ್ಲೆ ಮಾಡಿ ಅವರ ಬಳಿಯಿದ್ದ 57 ಸಾವಿರ ರೂ. ನಗದು, 3 ಮೊಬೈಲ್, ಪರ್ಸ್, ದಾಖಲಾತಿ ಇದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದಾಗಿ ಅವರು ವಿದ್ಯಾನಗರ ಪೊಲೀಸ್  ಠಾಣೆಯಲ್ಲಿ ದೂರು ನೀಡಿದ್ದರು.

ಆರೋಪಿತರನ್ನು ಪತ್ತೆ ಹಚ್ಚಿರುವ ಪೊಲೀಸರು, ಹರಪನಹಳ್ಳಿ ಯಲ್ಲಾಪುರದ ಪ್ರವೀಣ್ (23), ದೇವಣ್ಣ (39), ಸುಭಾಷ್ (24), ವೀರೇಶ್ (23) ಹಾಗೂ ದಾವಣಗೆರೆ ಕೆಟಿಜೆ ನಗರದ ಎಲ್. ಸಂಜಯ್ (23) ಇವರುಗಳನ್ನು ಬಂಧಿಸಿದ್ದು, ದರೋಡೆ ಮಾಡಿದ್ದ 10 ಸಾವಿರ ರೂ. ನಗದು, 40 ಸಾವಿರ ರೂ. ಬೆಲೆ ಬಾಳುವ 2 ಮೊಬೈಲ್, ಪರ್ಸ್, ಬ್ಯಾಗ್  ಹಾಗೂ 8 ಲಕ್ಷ ರೂ. ಬೆಲೆಯ ಒಂದು ಕಾರು, 1.50 ಲಕ್ಷ ರೂ. ಬೆಲೆಯ ಒಂದು ಬುಲ್ಲೆಟ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯವನ್ನು ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭಾವತಿ ಸಿ.ಶೇತಸನದಿ, ಆರ್.ಪಿ. ಅನಿಲ್, ಪಿಎಸ್‌ಐ ಎಂ.ಎಸ್. ದೊಡ್ಡಮನಿ, ಸಿಬ್ಬಂದಿಗಳಾದ ಆನಂದ ಮುಂದಲಮನಿ, ಗೋಪಿನಾಥ್ ಬಿ.ನಾಯ್ಕ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜುನಾಥ ಬಿ.ವಿ., ರುದ್ರೇಶ್, ಲಕ್ಷ್ಮಣ, ರಾಮಚಂದ್ರಪ್ಪ, ರಾಘವೇಂದ್ರ, ಶಾಂತರಾಜ್, ಸೋಮಪ್ಪ, ಮಾರುತಿ, ದೇವರಾಜ್, ಗುರುಸಿದ್ದನಗೌಡ ಅವರುಗಳಿಗೆ ಎಸ್ಪಿ ಡಾ.ಅರುಣ್ ಕೆ ಹಾಗೂ ಹೆಚ್ಚುವರಿ ಎಸ್ಪಿ ಆರ್.ಬಿ. ಬಸರಗಿ ಶ್ಲ್ಯಾಘಿಸಿದ್ದಾರೆ.

error: Content is protected !!