ರಾಣಿಯ ಬಿದನೂರಿನಲ್ಲಿ ವಂಚಿತ ವನಿತೆಯರು

ರಾಣಿಯ ಬಿದನೂರಿನಲ್ಲಿ ವಂಚಿತ ವನಿತೆಯರು - Janathavaniರಾಣೇಬೆನ್ನೂರು, ಮೇ 3- ಮಹಿಳಾ ಸಬಲೀಕರಣ, ಸ್ತ್ರೀ ಸಮಾನತೆ ರಾಜಕಾರಣದಲ್ಲಿ ವನಿತೆಯರಿಗೆ ಪ್ರಾತಿನಿಧ್ಯ  ಮುಂತಾದ ಆಶಯಗಳು ಕೇವಲ ಭಾಷಣಗಳಿಗೆ ಸೀಮಿತವಾಗಿದ್ದು, ಚುನಾವಣೆಗೆ ಟಿಕೆಟ್‌ ಕೊಡುವಾಗ ಮಹಿಳೆಯರನ್ನು ಕಡೆಗಣಿಸುವ ಪರಿಪಾಠ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮೊದಲಿನಿಂದಲೂ ನಡೆದು ಬಂದಿದೆ. ಸಾಮಾಜಿಕ ಹಬ್ಬ- ಹರಿದಿನಗಳಲ್ಲಿ  ಗರಿಗರಿ ಉಡುಗೆ ತೊಡುಗೆಗಳೊಂದಿಗೆ ಸಂಭ್ರಮಿಸುವ ಮಹಿಳಾಮಣಿಯರು ಜನತಂತ್ರದ ಹಬ್ಬದಲ್ಲಿ ಬೇವನುಂಡವರೇ ಹೆಚ್ಚು.

ಸ್ವಾತಂತ್ರ್ಯದ ನಂತರ  ನಡೆದ ಮೊದಲ ಎರಡು ಚುನಾವಣೆಗಳಲ್ಲಿ  ಪರಿಶಿಷ್ಡ  ಜಾತಿ ಮೀಸಲು ಕ್ಷೇತ್ರವಾಗಿದ್ದ ರಾಣೇಬೆನ್ನೂರಿನಿಂದ ಒಮ್ಮೆ ಅವಿರೋಧ ಆಯ್ಕೆಯಾಗಿ,  ನಂತರದ 1967 ರ ಚುನಾವಣೆಯಲ್ಲಿ  ಪಿ ಎಸ್ ಪಾರ್ಟಿಯ  ವೈ.ವಿ.ಜೋಗಣ್ಣನವರ ಅವರನ್ನು 6,119 ಮತಗಳ ಅಂತರದಿಂದ ಸೋಲಿಸಿ 18,715 ಮತಗಳನ್ನು ಪಡೆದು ಆಯ್ಕೆಯಾದ ಕಾಂಗ್ರೆಸ್ ಪಾರ್ಟಿಯ ಮೊದಲ ಮಹಿಳಾ ಶಾಸಕಿ ಸಾಂಬ್ರಾಣಿ ಎಲ್ಲಮ್ಮ. 

ನಂತರದ ದಿನಗಳಲ್ಲಿ ಮಹಿಳೆಯರಿಗೆ ಅಂತಹ ಅವಕಾಶಗಳು ಬರಲೇ ಇಲ್ಲಾ.  ಸುಮಾರು ಮೂರು ದಶಕಗಳ ಹಿಂದೆ ಬೆಂಗಳೂರು ಮೂಲದ ಶಾಂತಮ್ಮ ಪವಾಡಪ್ಪ ಎನ್ನುವವರು ಟಿಕೆಟ್‌ಗೆ ಪ್ರಯತ್ನಿಸಿ ವಿಫಲರಾದರು. ನಂತರದಲ್ಲಿ  ಜಿಲ್ಲಾ ಪರಿಷತ್ ಸದಸ್ಯೆಯಾಗಿದ್ದ ಕಮಲಾನಾಯ್ಕ, ತದನಂತರ  ಪ್ರಭಾವಿ ರಾಜಕೀಯ ಮನೆತನದಲ್ಲಿ ಜನಿಸಿದ ರುಕ್ಮಿಣಿ ಸಾವುಕಾರ, ಮಾಜಿ ಶಾಸಕರ ಮಗಳು, ನಗರದ ಪ್ರತಿಷ್ಟಿತ ಕುಟುಂಬದ ಸೊಸೆ ಭಾರತಿ ಜಂಬಗಿ,  ಜನಸೇವೆಯಲ್ಲಿ ಆತ್ಮತೃಪ್ತಿ ಕಾಣುವ ಹಂಬಲದ ಭಾರತಿ ಅಳವಂಡಿ ಹೀಗೆ ಬೆರಳೆಣಿಕೆಯಷ್ಟಿರುವ ಮಹಿಳೆಯರು ಅವಕಾಶ ವಂಚಿತರಾಗುತ್ತಿರುವುದು ವಿಷಾದಕರ ಸಂಗತಿ.    

error: Content is protected !!