ರಾಣೆಬೆನ್ನೂರು, ಮೇ 2 – ನಗರದ ಆರ್.ಟಿ.ಇ.ಎಸ್. ಪದವಿಪೂರ್ವ ಮಹಾವಿದ್ಯಾಲಯದ 2022 23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಒಟ್ಟು ಫಲಿತಾಂಶ ಶೇಕಡ 98 % ಕಾಲೇಜಿನ ಒಟ್ಟು 300 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 49 ವಿದ್ಯಾ ರ್ಥಿಗಳು ಅತ್ಯುನ್ನತ ಶ್ರೇಣಿ, 153 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 41 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, 28 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಕಲಾ ವಿಭಾಗದ ಕುಮಾರ್ ಗುಳೇದ ರವಿ 555 ಅಂಕಗಳೊಂದಿಗೆ 92.50% ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಕುಮಾರಿ ಮಂಜುಳಾ ಎಸ್. ಸರವಂದ 568 ಅಂಕ 94.67% ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಕುಮಾರಿ ರಕ್ಷಿತಾ ಎ. ನಾಡಿಗೇರ ಇವರು ಭೌತ ಶಾಸ್ತ್ರ 97, ರಸಾಯನಶಾಸ್ತ್ರ 99, ಗಣಿತ ಶಾಸ್ತ್ರ 98, ಜೀವಶಾಸ್ತ್ರ 99 ಒಟ್ಟು PC MB 98.25%, ಒಟ್ಟು 578 ಅಂಕಗಳನ್ನು ಪಡೆದು PCMB ಸಂಯೋ ಜನೆಯಲ್ಲಿ ರಾಣೇಬೆನ್ನೂರು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವುದಲ್ಲದೇ, ಹಾವೇರಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಆರ್.ಟಇಇ.ಎಸ್ ಸಂಸ್ಥೆಯ ಅಧ್ಯಕ್ಷ ಸುಭಾಷ್ ವಿ.ಸಾಹುಕಾರ, ಶ್ರೀಮತಿ ಎನ್ .ಕೆ ಕೋಟಿ ಕಾರ್ಯದರ್ಶಿಗಳು ಹಾಗೂ ಪ್ರಾಚಾರ್ಯ ಪಿ.ಬಿ.ಖಟಾವಕರ್ ಶುಭ ಕೋರಿದರು.