ನೀರಿನ ಕಂದಾಯ ಮನ್ನಾ ಮಾಡಲಿ

ದಾವಣಗೆರೆ, ಮೇ 2- ಉಪ್ಪು ನೈಸರ್ಗಿಕ ಅವಶ್ಯಕವೆಂದು ಉಪ್ಪಿನ ಮೇಲೆ ತೆರಿಗೆ ಹಾಕಬಾರದೆಂದು ಕಳೆದ 93 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ  ಸತ್ಯಾಗ್ರಹ ನಡೆಸಿದ್ದರು. ಅದೇ ರೀತಿ ನೀರು ಕೂಡ ನೈಸರ್ಗಿಕ ಅತ್ಯವಶ್ಯಕ ಆಗಿರುವುದರಿಂದ ನೀರಿನ ಮೇಲಿನ ಕಂದಾಯವನ್ನು ಮನ್ನಾ ಮಾಡಬೇಕೆಂದು ಆಂಟಿ ಕರೆಪ್ಷನ್, ಆಂಟಿ ರಿಸರ್ವೇಷನ್ ಪೀಪಲ್ ವೆಲ್ಫೇರ್ ಪಕ್ಷದ ಡಾ. ಶ್ರೀಧರ್ ಒತ್ತಾಯಿಸಿದ್ದಾರೆ. ಗಾಂಧೀಜಿಯವರು ಉಪ್ಪು ಅತ್ಯಾವಶ್ಯಕ ಆಗಿರುವುದರ ಮೇಲೆ ಕರ ವಿಧಿಸುವುದು ಸೂಕ್ತವಲ್ಲ ಎಂದಿದ್ದರು. ಆದ್ದರಿಂದ ಉಪ್ಪಿಗೆ ಬೇಡವಾದ ಕರ ನೀರಿಗೂ ಬೇಡ. ಅದೇ ರೀತಿ ವಾಸದ ಮನೆಗೆ ಕಂದಾಯ ಮನ್ನಾ ಮಾಡಬೇಕು, ಹೆಲ್ಮೆಟ್ ಹಾಕದಿದ್ದರೆ ದಂಡ ವಸೂಲಿ ಮಾಡಬಾರದು, 18 ವರ್ಷದ ಮೇಲಿನವರಿಗೆ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕೆಂಬ ಸಂಗತಿಗಳಿಗೆ ಬೆಂಬಲಿಸುವ ಅಭ್ಯರ್ಥಿಗಳಿಗೆ ನಮ್ಮ ಪಕ್ಷ ಬೆಂಬಲ ಕೊಡಲಿದೆ ಎಂದಿದ್ದಾರೆ.

error: Content is protected !!