ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಅರುಣ್‍ಕುಮಾರ್

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಅರುಣ್‍ಕುಮಾರ್ - Janathavaniದಾವಣಗೆರೆ, ಏ.26- ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್ ಕುಮಾರ್ ಅತ್ಯಧಿಕ 62 ಮತಗಳ  ಅಂತರದಿಂದ ಜಯಶೀಲರಾಗಿದ್ದಾರೆ.

ಎಲ್.ಹೆಚ್. ಅರುಣ್ ಕುಮಾರ್ 319 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಪಂಚಪ್ಪ ಯಲ್ಲಪ್ಪ ಹಾದಿಮನಿ 257 ಮತಗಳನ್ನು ಪಡೆದಿದ್ದಾರೆ. ಅವರೊಂದಿಗೆ ಕಣದಲ್ಲಿದ್ದ ಮಲ್ಲಿಕಾರ್ಜುನಪ್ಪ ಗುಮ್ಮನೂರು 168 ಮತ್ತು ಗೋಪಾಲ್ 93 ಮತಗಳನ್ನು ಪಡೆದಿದ್ದಾರೆ. 9 ಮತಗಳು ತಿರಸ್ಕೃತಗೊಂಡಿವೆ.

ಕಾರ್ಯದರ್ಶಿಯಾಗಿ ಎಸ್. ಬಸವರಾಜ್ ಅವರು 10 ಮತಗಳ ಅಂತರಲ್ಲಿ  ಚುನಾಯಿತರಾಗಿದ್ದಾರೆ. ಬಸವರಾಜ್ 298 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧೆ ಎಸ್. ಮಂಜು 288 ಮತಗಳನ್ನು ಪಡೆದಿದ್ದಾರೆ.  ಮತ್ತೋರ್ವ ಆಕಾಂಕ್ಷಿ ಪಿ.ಲಕ್ಕಪ್ಪ 246 ಮತಗಳನ್ನು ಪಡೆದಿದ್ದಾರೆ. 10 ಮತಗಳು ತಿರಸ್ಕೃತಗೊಂಡಿವೆ.

ಉಪಾಧ್ಯಕ್ಷರಾಗಿ ಜಿ.ಕೆ. ಬಸವರಾಜ್ ಗೋಪನಾಳ್ ಅವರು 395 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ವಿನಯ್ ಕುಮಾರ್ ಸಾಹುಕಾರ್ ಪರಾಭವಗೊಂಡಿದ್ದಾರೆ. ವಿನಯ್ ಕುಮಾರ್ 271 ಮತ್ತು ದೇವಿಕುಮಾರ್ 162 ಮತಗಳನ್ನು ಪಡೆದಿದ್ದಾರೆ. 5 ಮತಗಳು ತಿರಸ್ಕೃತಗೊಂಡಿವೆ.

114 ಮತಗಳ ಅಂತರದಲ್ಲಿ ಎ.ಎಸ್. ಮಂಜುನಾಥ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಎ.ಎಸ್. ಮಂಜುನಾಥ್ 368 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ವಿ. ವಸಂತ ಕುಮಾರ್ 254 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.  ಅವರೊಂದಿಗೆ ಕಣದಲ್ಲಿದ್ದ ಶ್ರೀರಾಮ ಕೃಷ್ಣ ಗೌಡ ಈಳಿಗೇರ 76, ಕೆ.ಬಿ.ಗಂಗಾಧರ ನಾಯ್ಕ 75, ಎನ್. ಜಯಣ್ಣ 42 ಮತಗಳನ್ನು ಪಡೆದಿದ್ದಾರೆ. 26 ಮತಗಳು ತಿರಸ್ಕೃತಗೊಂಡಿವೆ. 

ಅವಿರೋಧ ಆಯ್ಕೆ : ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ಎಲ್ಲಾ 9 ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿದೆ. 

ಬಿ. ಅಜ್ಜಯ್ಯ, ಆರ್. ಭಾಗ್ಯಲಕ್ಷ್ಮಿ, ಎಂ. ಚೌಡಪ್ಪ, ಟಿ.ಹೆಚ್. ಮಧುಸೂದನ್,  ಹೆಚ್. ನಾಗರಾಜ್, ಕೆ.ಎಂ. ನೀಲಕಂಠಯ್ಯ, ಎಂ. ರಾಘವೇಂದ್ರ, ಜಿ.ಟಿ. ಸಂತೋಷ್ ಕುಮಾರ್ ಮತ್ತು ವಾಗೀಶ್ ಕಟಗಿಹಳ್ಳಿಮಠ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2023 – 2025ನೇ ದ್ವೈ ವಾರ್ಷಿಕ ಅವಧಿಗೆ ಈ ಚುನಾವಣೆಯು ಸಂಘದ ಕಚೇರಿಯಲ್ಲಿ ಮೊನ್ನೆ ನಡೆಯಿತು. ಸಂಘದ 1200 ಆಜೀವ ಸದಸ್ಯರ ಪೈಕಿ  846 ಮತದಾರರು ತಮ್ಮ ಹಕ್ಕು ಚಲಾಯಿಸಿದರು.   

ಸಂಘದ ಹಿರಿಯ ನ್ಯಾಯವಾದಿ ಎಲ್.ದಯಾನಂದ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

error: Content is protected !!