ಮೂಢನಂಬಿಕೆಗಳಿಂದ ಹೊರ ಬಂದು ವೈಚಾರಿಕ ನಿಲುವು ತಳಿಯಬೇಕು

ಮೂಢನಂಬಿಕೆಗಳಿಂದ ಹೊರ ಬಂದು ವೈಚಾರಿಕ ನಿಲುವು ತಳಿಯಬೇಕು

ಕದಳಿ ವೇದಿಕೆಯ ಬಸವ ಜಯಂತ್ಯೋತ್ಸವದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ಏ. 26- ಗುಡಿಗಳಿಂದ ಶೋಷಣೆ ಹೆಚ್ಚುತ್ತಿದೆ. ಶರಣರು ಹೇಳಿದಂತೆ ಕಾಯಕವೇ ಕೈಲಾಸ, ಮೂಢನಂಬಿಕೆಗಳಿಂದ ಹೊರ ಬಂದು ವೈಚಾರಿಕ ನಿಲುವನ್ನು ತಳೆಯಬೇಕು ಹಾಗೂ ವಿಧಾನಸಭಾ ಚುನಾವಣೆ ಬಂದಿದೆ. ಯಾರೂ ಸಹ ಆಮಿಷಕ್ಕೆ ಒಳಗಾಗದೆ, ಮತದಾನ ಮಾಡಬೇಕೆಂದು ಸಾಣೇಹಳ್ಳಿಯ   ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಕದಳಿ ವೇದಿಕೆ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಸಾಹಿತಿ ಡಾ. ಬಸವರಾಜ ನೆಲ್ಲಿಸರ ಅವರು ಬಸವಣ್ಣನವರ ವಚನಗಳನ್ನು ಉದಾಹರಿಸಿ, 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಅಂತ್ಯದ ನಿಗೂಢತೆ ಈಗಲೂ ಕಾಡುತ್ತಿದೆ ಎಂದು ತಿಳಿಸಿದರು.

ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಸವ ಮಂಟಪವನ್ನು ಸ್ಥಾಪಿಸಿದಂತಹ ಶರಣೆ ಅನುಸೂಯಾದೇವಿ ಪಾಟೀಲ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ರಾಜ್ಯ ಕದಳಿ ವೇದಿಕೆಯ ಉಪ ಸಂಚಾಲಕರಾದ ಪ್ರಮೀಳಾ ನಟರಾಜ್, ಜಿಲ್ಲಾಧ್ಯಕ್ಷೆ ವಿನೋದ ಅಜಗಣ್ಣನವರ್ ಉಪಸ್ಥಿತರಿದ್ದರು.

ಗಾಯತ್ರಿ ವಸ್ತ್ರದ್ ಕಾರ್ಯಕ್ರಮ ನಿರೂಪಿಸಿದರು. ವಿನೋದಾ ವಂದಿಸಿದರು. ಕದಳಿ ಸಹೋದರಿಯರಿಂದ ವಚನ ಗಾಯನ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.

error: Content is protected !!