ಚನ್ನಗಿರಿ, ಏ. 27- ಮನುಷ್ಯನ ಜೀವನ ಬಹಳಷ್ಟು ಒತ್ತಡದಿಂದ ಕೂಡಿದೆ. ಭೌತಿಕ ಬದುಕಿನಲ್ಲಿ ಎಲ್ಲ ಸಂಪನ್ಮೂಲಗಳಿದ್ದರೂ ಶಾಂತಿ ಯಿಲ್ಲ. ಮನಸ್ಸಿನ ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಈ ಜಗತ್ತಿನಲ್ಲಿ ಯಾವುದೂ ಇಲ್ಲ ವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಶೆಟ್ಟಿಹಳ್ಳಿ ಗ್ರಾಮದಲ್ಲಿ ನೂತನ ಶಿಲಾಮಂದಿರ ಉದ್ಘಾಟನೆ ಮತ್ತು ಶ್ರೀ ಗುರು ರೇವಣಸಿದ್ಧಯ್ಯ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆಯ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ದುಗ್ಗಾವತಿ ಹಿರೇಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮತ್ತು ವೀರಭದ್ರಸ್ವಾಮಿಗಳು ಮಾರ್ಗದರ್ಶನ ನೀಡಿದ ಸಮಾರಂಭದಲ್ಲಿ ಬಸವಾಪಟ್ಟಣ ರಾಂಪುರದ ಶಿವಕುಮಾರ ಹಾಲಸ್ವಾಮಿಗಳು ಹಾಗೂ ಕತ್ತಲಗೆರೆ ಉಮಾಪತಿ ಹಾಲಸಿದ್ಧೇಶ್ವರ ಸ್ವಾಮಿಗಳು ಉಪಸ್ಥಿತರಿದ್ದರು.
ಕಶೆಟ್ಟಿಹಳ್ಳಿ ಕೆ.ಎಂ. ರುದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಹೆಚ್.ಎಂ.ಜಯದೇವಯ್ಯ ಸ್ವಾಗತಿಸಿದರು. ದೀಕ್ಷಿತ್ ಆರ್. ಪ್ರಾರ್ಥಿಸಿದರು. ಬಸವಾಪಟ್ಟಣದ ವಿದ್ಯಾಶ್ರೀ ನಿರೂಪಿಸಿದರು.