ದಾವಣಗೆರೆ, ಏ. 26 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭೂ ಸಾಹಸ ಕ್ರೀಡೆಯಾದ ವಾಲ್ ಕ್ಲೈಂಬಿಂಗ್ ಆಯೋಜಿಸುವುದರ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಸ್ಪೋಟ್ರ್ಸ್ ಕ್ಲೈಂಬಿಂಗ್ ಉಚಿತ ಶಿಬಿರ ಏರ್ಪಡಿಸಿದ್ದರು. ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಚೇತಾ ನೆಲವಿಗಿ, ರಾಷ್ಟ್ರೀಯ ಸಹಾಸ ಅಕಾಡೆಮಿಯ ತರಬೇತುದಾರ ಅಶ್ಮತ್ ಉಲ್ಲಾ ಪಿ.ಎಲ್. ಉಪಸ್ಥಿತರಿದ್ದರು.