ನಗರದಲ್ಲಿ ಇಂದು ಸಿದ್ದಗಂಗಾ ಗೆಳೆಯರ ಬಳಗದಿಂದ ಬಸವ ಜಯಂತಿ

ಸಿದ್ದಗಂಗಾ ಗೆಳೆಯರ ಬಳಗದ ವತಿಯಿಂದ ವಿನೋಬ ನಗರ, 3 ನೇ ಮುಖ್ಯ ರಸ್ತೆ , 1 ನೇ ಅಡ್ಡ ರಸ್ತೆಯ ವಿಶ್ವ ಗುರು ಬಸವೇಶ್ವರ ವೃತ್ತದಲ್ಲಿ ಇಂದು ಸಂಜೆ 6 ಗಂಟೆಗೆ ಬಸವ ಜಯಂತಿಯನ್ನು ಆಚರಿಸಲಾಗುವುದು. ಶ್ರೀಶೈಲ ಮಠದ ಸಂಸ್ಕೃತ ಪಾಠ ಶಾಲೆಯ ಮಕ್ಕಳಿಂದ ವಚನಾಭಿಷೇಕದೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದು ಸಿದ್ಧಗಂಗಾ ಗೆಳೆಯರ ಬಳಗದ ಸಂಘಟನಾ ಕಾರ್ಯದರ್ಶಿ ಕೇಶವ್ ಶೇಟ್‌ ತಿಳಿಸಿದ್ದಾರೆ.

error: Content is protected !!