ವಾಗೀಶ ಸ್ವಾಮಿ ನಾಮಪತ್ರ ತಿರಸ್ಕೃತ ಪತ್ನಿ ನಾಮಪತ್ರ ಕ್ರಮಬದ್ಧ

ದಾವಣಗೆರೆ, ಏ. 22- ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ ಅವರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ, ಅವರು ಸಲ್ಲಿಸಿದ್ದ 3 ನಾಮಪತ್ರಗಳು ತಿರಸ್ಕೃತಗೊಂಡಿವೆ. ಹಲವರ ವಿರೋಧದ ನಡು ವೆಯೂ ವಾಗೀಶ ಸ್ವಾಮಿ ಅವರು ಮಾಯಕೊಂಡ ವಿಧಾನಸಭಾ ಮೀಸಲು ಕ್ಷೇತ್ರದಿಂದ ಪಕ್ಷೇತರರಾಗಿ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದರು.

ಆದರೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಶಿಫಾರಸ್ಸಿನಂತೆ ವಾಗೀಶ್ ಅವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಮಪತ್ರಗಳನ್ನೂ ತಿರಸ್ಕರಿಸಲಾಗಿದೆ.  ಈ ಕುರಿತು ತಾವು ಹೈಕೋರ್ಟ್ ಮೊರೆ ಹೋಗುವುದಾಗಿ ವಾಗೀಶ್ ಹೇಳಿದ್ದಾರೆ. ವಾಗೀಶ್ ಅವರ ಪತ್ನಿ ಪುಷ್ಪಾ ಬಿ.ಎಂ. ಪಕ್ಷೇತರರಾಗಿ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿದೆ.

error: Content is protected !!