ಜಗಳೂರು,ಏ.21- ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿ ಸಿದ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ನಡೆಯಿತು.
ಚುನಾವಣಾಧಿಕಾರಿ ಎಸ್. ರವಿ ಹಾಗೂ ಸಹಾಯಕ ಚುನಾವ ಣಾಧಿಕಾರಿ ಜಿ. ಸಂತೋಷ್ ಕುಮಾರ್ ಇಂದು ಬೆಳಗ್ಗೆ ಕಚೇರಿ ಯಲ್ಲಿ ನಾಮಪತ್ರ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ಸಮಕ್ಷಮ ನಾಮ ಪತ್ರಗಳ ಪರಿಶೀಲನೆ ನಡೆಸಿದರು. ಎಲ್ಲಾ 12 ಜನ ಸಲ್ಲಿಸಿದ್ದ ನಾಮಪತ್ರಗಳು ಕ್ರಮಬದ್ಧವಾ ಗಿದ್ದು, ಯಾವುದೇ ನಾಮಪತ್ರ ತಿರಸ್ಕೃತಗೊಂಡಿರುವುದಿಲ್ಲ.
ನಾಮಪತ್ರ ಕ್ರಮಬದ್ಧ: ಮಲ್ಲಾಪುರ ದೇವರಾಜ್ (ಜೆಡಿಎಸ್), ಬಿ. ದೇವೇಂದ್ರಪ್ಪ (ಕಾಂಗ್ರೆಸ್), ಎಸ್.ವಿ. ರಾಮ ಚಂದ್ರ (ಬಿಜೆಪಿ) ಜಿ. ಸ್ವಾಮಿ (ಸಮಾಜವಾದಿ ಪಾರ್ಟಿ) ಮತ್ತು ಪಿ.ಅಜ್ಜಯ್ಯ, ಎಸ್.ಆರ್. ಇಂದಿರಾ, ಡಿ ತಿಪ್ಪೇಸ್ವಾಮಿ, ದಿವಾಕರ್, ನಾಗರಾಜ್ ಎಂ, ಭೀಮಪ್ಪ ಜಿ.ಎನ್, ರಾಘವೇಂದ್ರ ಕೆ.ಆರ್, ಎಚ್. ಪಿ .ರಾಜೇಶ್ (ಪಕ್ಷೇತರ).