ಹಡಗಲಿ, ಏ. 21 – ವಿಧಾನಸಭಾ ಚುನಾವಣೆಗಾಗಿ ಹಡಗಲಿ ಕ್ಷೇತ್ರಕ್ಕೆ ಸಲ್ಲಿಸಲಾಗಿದ್ದ ಒಂಭತ್ತು ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿದ್ದರೆ, ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಒಟ್ಟು 15 ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ಎರಡು ತಿರಸ್ಕೃತಗೊಂಡಿವೆ. ಇದರಲ್ಲಿ ನಾಲ್ಕು ಹೆಚ್ಚುವರಿ ನಾಮಪತ್ರಗಳಿದ್ದವು. ಒಟ್ಟು 9 ಅಭ್ಯರ್ಥಿಗಳ ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣೆ ಅಧಿಕಾರಿ ಶರಣಪ್ಪ ಮುದುಗಲ್ ತಿಳಿಸಿದ್ದಾರೆ. ಪುತ್ರೇಶ್ ಕಾಯಣ್ಣನವರ್ – ಜೆಡಿಎಸ್, ಕೃಷ್ಣ ನಾಯಕ್ – ಬಿಜೆಪಿ, ಪಿ.ಟಿ. ಪರಮೇಶ್ವರ ನಾಯಕ್ – ಕಾಂಗ್ರೆಸ್, ಎನ್. ಶ್ರೀಕಾಂತ್ ನಾಯಕ್ – ಎಎಪಿ, ಎಲ್. ಅನಿಲ್ ಕುಮಾರ್ – ಕರ್ನಾಟಕ ರಾಷ್ಟ್ರ ಸಮಿತಿ, ಡಿ ಭೋಜ್ಯಾ ನಾಯಕ್ – ಕಲ್ಯಾಣ ರಾಜ್ಯ ಪ್ರಗತಿಪಕ್ಷ, ಲಕ್ಕಪ್ಪ ಅಂಗಡಿ – ರಾಣಿ ಚೆನ್ನಮ್ಮ ಪಾರ್ಟಿ, ಎಸ್. ಮಲ್ಲೇಶ್ ನಾಯಕ್ – ಪಕ್ಷೇತರ ಕೆ. ಹುಚ್ಚಂಗೆಪ್ಪ – ಪಕ್ಷೇತರ ಅವರು ಈಗ ಕಣದಲ್ಲಿದ್ದಾರೆ.