ಕಾಯಿಪೇಟೆ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆ ಭಾನುವಾರ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.
ಇಂದು ಪ್ರಾತಃಕಾಲ ಶ್ರೀ ಬಸವೇಶ್ವರ ಪಾದಕ್ಕೆ ಮಹಾರುದ್ರಾಭಿಷೇಕ ಜರುಗಲಿದೆ. ನಾಳೆ ಭಾನುವಾರ ಮುಂಜಾನೆ 6 ಗಂಟೆಗೆ ತೊಟ್ಟಿಲು ಪೂಜೆ, ಸಂಜೆ 7 ಗಂಟೆಗೆ ವಿದ್ಯುತ್ ಅಲಂಕೃತವಾದ ಭವ್ಯವಾದ ಹೂವಿನ ಮಂಟಪದಲ್ಲಿ ಶ್ರೀ ಬಸವೇಶ್ವರ ಮೂರ್ತಿಯ ಮೆರವಣಿಗೆ ರಾಜಬೀದಿಗಳಲ್ಲಿ ಜರುಗಲಿದೆ.
ಬಸವ ಜಯಂತಿ ಪ್ರಯುಕ್ತ ನಾಡಿದ್ದು ದಿನಾಂಕ 24ರ ಸೋಮವಾರ ಸರ್ವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಲು ಅನುಕೂಲವಾಗುವಂತೆ ನಾಳೆ ಭಾನುವಾರ ವಾರದ ಸಂತೆಯನ್ನು ರದ್ದು ಪಡಿಸಬೇಕೆಂದು ದೇವಸ್ಥಾನ ಸಂಘದ ಪದಾಧಿಕಾರಿಗಳು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ.