ಜಗಳೂರು : ಚುನಾವಣಾ ವೀಕ್ಷಕರಾಗಿ ರಂಜಿತ್ ಕುಮಾರ್

ಜಗಳೂರು, ಏ.21- ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ವೀಕ್ಷಕರಾಗಿ ಚುನಾವಣಾ ಆಯೋಗದಿಂದ ಐಎಎಸ್ ಅಧಿಕಾರಿ ಜೆ.ರಂಜಿತ್ ಕುಮಾರ್ ಅವರು  ನೇಮಕಗೊಂಡಿದ್ದಾರೆ.

ಸಾರ್ವಜನಿಕರು ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ದಿನಗಳಂದು ಮಧ್ಯಾಹ್ನ  3  ರಿಂದ 4 ಗಂಟೆಯವರೆಗೆ ಭೇಟಿ ಮಾಡಬಹುದು. ಚುನಾವಣೆಗೆ ಸಂಬಂಧಿಸಿದ ಯಾವುದೇ ಅಹವಾಲುಗಳು, ದೂರುಗಳು, ಸಲಹೆಗಳು  ಇದ್ದಲ್ಲಿ ಸಾರ್ವಜನಿಕರು, ರಾಜಕೀಯ  ಪಕ್ಷಗಳು, ಅಭ್ಯರ್ಥಿಗಳು, ವೀಕ್ಷಕರನ್ನು ಭೇಟಿ ಮಾಡುವ ಮೂಲಕ ಅಥವಾ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ನೀಡುವ ಮೂಲಕ ಗಮನ ಸೆಳೆಯಬಹುದಾಗಿದೆ. ವೀಕ್ಷಕರ ದೂರವಾಣಿ : 90999 88898 ಕರೆ ಮಾಡಲು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!