ರಾಣೇಬೆನ್ನೂರು: ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು

ರಾಣೇಬೆನ್ನೂರು: ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು

ರಾಣೇಬೆನ್ನೂರು,ಏ.19-   ವಿಧಾನಸಭೆ ಚುನಾವ ಣೆಗೆ ಸ್ಪರ್ಧಿಸಲು  ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್. ಶಂಕರ್ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಬಿಜೆಪಿ ಮೆರವಣಿಗೆಯು ಬಸ್ ನಿಲ್ದಾಣ, ಬಸ್ ಸ್ಟ್ಯಾಂಡ್ ರೋಡ್, ಪೋಸ್ಟ್ ಸರ್ಕಲ್, ಎಂ.ಜಿ.ರಸ್ತೆ, ದರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್ ಮೂಲಕ ಹಾಯ್ದು ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.   ಗ್ರಾಮೀಣ ಹಾಗೂ ನಗರದ ಬಿಜೆಪಿ ಅಭಿಮಾನಿಗಳು, ಕಾರ್ಯಕರ್ತರು, ಜೊತೆಗೆ ಅರುಣಕುಮಾರ ಅಭಿಮಾನಿಗಳು ಸೇರಿದಂತೆ ನೆರದಿದ್ದ ಅಪಾರ ಪ್ರಮಾಣದ ಜನರ ಮೆರವಣಿಗೆ  ಮೈಲುದ್ದದಷ್ಟಿತ್ತು.

ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ರಾಮಲಿಂಗಣ್ಣನವರ, ಎಪಿಎಂಸಿ ಮಾಜಿ ನಿರ್ದೇಶಕ ಪರಮೇಶ ಗೂಳಣ್ಣನವರ, ಪಕ್ಷದ ಅಧ್ಯಕ್ಷ ಬಸವರಾಜ ಕೇಲಗಾರ, ಅರಣ್ಯ ಅಭಿವೃದ್ಧಿ ನಿರ್ದೇಶಕಿ ಭಾರತಿ ಜಂಬಗಿ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ನಾಗರಾಜ ಪವಾರ, ಬಸವರಾಜ ಹುಲ್ಲತ್ತಿ, ಅಮೋಘ ಬದಾಮಿ, ವಿಜಯಕುಮಾರ ಮತ್ತಿತರರಿದ್ದರು.

ಗಂಗಾಜಲ ಚೌಡೇಶ್ವರಿ ದೇವಸ್ಥಾನದಿಂದ ಹೊರಟ ಎನ್.ಸಿ.ಪಿ ಅಭ್ಯರ್ಥಿ ಆರ್. ಶಂಕರ್ ಅವರ ಮೆರವಣಿಗೆ ಮೆಡ್ಲೇರಿ ಕ್ರಾಸ್,  ಪೋಸ್ಟ್ ಸರ್ಕಲ್, ಎಂಜಿ ರಸ್ತೆ, ದರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್ ಮೂಲಕ ಹಾಯ್ದು ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ರಾಣೇಬೆನ್ನೂರು: ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು - Janathavani

ಡಾ. ಬಸವರಾಜ ಕೇಲಗಾರ ಅವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ತೊರೆದ ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ, ಜೆಟ್ಟೆಪ್ಪ ಕರೇಗೌಡ ಅವರಿಗೆ ಟಿಕೆಟ್‌ ನಿರಾಕರಿಸಿದ್ದರಿಂದ ಕಾಂಗ್ರೆಸ್ ತೊರೆದ ಜಿಪಂ ಮಾಜಿ ಸದಸ್ಯ ಶಿವಾನಂದ ಕನ್ನಪ್ಪಳವರ, ಗಂಗಾ ಬ್ಯಾಂಕ್ ಅಧ್ಯಕ್ಷ ರತ್ನಾಕರ ಕುಂದಾಪೂರ, ರಾಜು ಅಡಿವೆಪ್ಪನವರ, ನಿಂಗಪ್ಪ ಕೋಡಿಹಳ್ಳಿ, ಆನಂದ ನಡುಬನ್ನಿ ಮತ್ತಿತರರಿದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಬೃಹತ್ ಸಂಖ್ಯೆಯ ಶಂಕರ್ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆ, ಹೊರ ಜಿಲ್ಲೆಯ ಆಯಾ ಪಕ್ಷ ಹಾಗೂ ವ್ಯಕ್ತಿಗಳ ಅಭಿಮಾನಿಗಳು ಆಯಾ ದಿನಗಳಂದು ಮೆರವಣಿಗೆಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಮೆರವಣಿಗೆಗಳ ಉದ್ದ ಹೆಚ್ಚಾಗುತ್ತಿದೆ ಎಂದು  ಅನೇಕರು ಅಭಿಪ್ರಾಯಿಸುತ್ತಿದ್ದಾರೆ. ನಗರದಲ್ಲಿ ದಿನಾಂಕ 13 ರ ನಂತರ ಹೋಟೆಲ್, ಖಾನಾವಳಿಗಳ ವ್ಯಾಪಾರ ಹೆಚ್ಚಾಗಿದೆ. ಮದ್ಯದಂಗಡಿಗಳ ವಹಿವಾಟು ಡಬ್ಬಲ್ ಆಗಿದೆ ಎನ್ನಲಾಗುತ್ತಿದೆ.

error: Content is protected !!