ಸೂಡಾನ್‌ನಲ್ಲಿ ಜಿಲ್ಲೆಯ ಹಕ್ಕಿಪಿಕ್ಕಿ ಜನರ ಆತಂಕ

ಸೂಡಾನ್‌ನಲ್ಲಿ ಜಿಲ್ಲೆಯ ಹಕ್ಕಿಪಿಕ್ಕಿ ಜನರ ಆತಂಕ

ಕುಟುಬದವರಿಗೆ ಧೈರ್ಯ ಹೇಳಿದ ಡಿಸಿ ಕಾಪಾಶಿ

ದಾವಣಗೆರೆ, ಏ.1- ಉದ್ಯೋಗಕ್ಕಾಗಿ ಆಫ್ರಿಕಾದ ಸೂಡಾನ್ ರಾಜಧಾನಿ ಖಾರ್ಟೂಮ್‍ಗೆ ತೆರಳಿರುವ  ಕುಟುಂಬದವರ ಮಾಹಿತಿ ಸಂಗ್ರಹಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಕುಟುಂಬದವರಿಗೆ ಧೈರ್ಯ ತುಂಬಿಸಿದರು.

ಆಫ್ರಿಕಾದ ಸೂಡಾನ್ ದೇಶದಲ್ಲಿ ಸೇನೆ ಮತ್ತು ಅರೆ ಸೇನೆ ನಡುವೆ ಘರ್ಷಣೆ ನಡೆಯುತ್ತಿದ್ದು ಕೆಲವು ಹಾನಿಯುಂಟಾಗಿದೆ.  ಚನ್ನಗಿರಿ ತಾಲ್ಲೂಕಿನ ಅಸ್ತಾಪನ ಹಳ್ಳಿ ಮತ್ತು ಗೋಪನಹಳ್ಳಿಯ ಹಕ್ಕಿಪಿಕ್ಕಿ ಜನರು ತೆರಳಿದ್ದು ಸೇನೆ ಮತ್ತು ಅರೆ ಸೇನಾ ಘರ್ಷಣೆಯಿಂದ ಭಯಭೀತರಾಗಿ ಕುಟುಂಬದವರಿಗೆ ಕರೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ   ಜಿಲ್ಲಾಧಿಕಾರಿಗಳು ಬುಧವಾರ ಗ್ರಾಮಗಳಿಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮತ್ತು ಸೂಡಾನ್‍ನಲ್ಲಿರುವ ಈ ಜನರೊಂದಿಗೆ ಮಾತನಾಡಿದರು.

ಅಸ್ತಾಪನಹಳ್ಳಿಯಿಂದ ಸುಮಾರು 10 ಮತ್ತು ಗೋಪನಾಳ್ ಗ್ರಾಮದಿಂದ 29 ಜನರು ಉದ್ಯೋಗಕ್ಕಾಗಿ ಸೂಡಾನ್ ತೆರಳಿದ್ದಾರೆ. ಇವರೆಲ್ಲರೂ ಒಟ್ಟಿಗೆ ಇರುತ್ತಾರೆ. ಸೂಡಾನ್‍ನಲ್ಲಿರುವವರ ಜೊತೆಗೆ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು.

ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು ಭಾರತೀಯ ರಾಯಭಾರ ಕಚೇರಿಯು ನಿಮ್ಮೊಂದಿಗೆ ಇರಲಿದೆ. ರಾಯಭಾರ ಕಚೇರಿಯಿಂದ ತಮ್ಮ ಕ್ಯಾಂಪ್ ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ಯನ್ನು ನೀಡಲು ತಿಳಿಸಿದರು ಮತ್ತು ಅನಗತ್ಯವಾಗಿ ಯಾವುದೇ ಬೇರೆ ಕರೆಗಳಿಗೆ ಉತ್ತರಿಸದಂತೆ ಎಚ್ಚರ ವಹಿಸಲು ಮತ್ತು ಜಿಲ್ಲಾ ಅಡಳಿತದಿಂದ ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಸಹ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸಾಂತ್ವನ ಹೇಳಿದರು.

error: Content is protected !!