ಜಿಲ್ಲೆಯಲ್ಲಿ ಒಟ್ಟು 95 ನಾಮಪತ್ರಗಳು ಸಲ್ಲಿಕೆ

ದಾವಣಗೆರೆ, ಏ.19- ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ದಾವಣಗೆರೆಯ 7 ಕ್ಷೇತ್ರಗಳಲ್ಲಿ ಏಪ್ರಿಲ್ 19 ರ ವರೆಗೆ ಪುರುಷ 77 ಹಾಗೂ 7 ಮಹಿಳೆ ಯರು ಸೇರಿ 84 ಅಭ್ಯರ್ಥಿಗಳಿಂದ 95 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಒಟ್ಟು ಸಲ್ಲಿಕೆಯಾದ ನಾಮಪತ್ರಗಳಲ್ಲಿ 87 ಪುರುಷ, 8 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷವಾರು ವಿವರದನ್ವಯ ಬಿಜೆಪಿ 18, ಕಾಂಗ್ರೆಸ್ 13, ಆಮ್ ಆದ್ಮಿ 2, ಬಿಎಸ್‍ಪಿ 2, ಜೆಡಿಎಸ್ 7, ನೋಂದಾಯಿತ, ನೋಂದಾಯಿತವಲ್ಲದ ಪಕ್ಷಗಳಿಂದ 22, ಪಕ್ಷೇತರ 31 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಜಗಳೂರು ಎಸ್‌.ಟಿ ಮೀಸಲು ಕ್ಷೇತ್ರದಿಂದ ಪಿ.ಅಜ್ಜಯ್ಯ ಲೋಕಶಕ್ತಿ ಪಕ್ಷ, ಹೆಚ್.ಪಿ.ರಾಜೇಶ್ ಸೇರಿ ಇದುವರೆಗೆ 7 ನಾಮಪತ್ರ ಸಲ್ಲಿಕೆಯಾಗಿವೆ.

ಹರಿಹರ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಪಿ.ಹರೀಶ್, ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯ ಸಂಕೇತ್.ಎಸ್, ಜೆಡಿಎಸ್‍ನಿಂದ ಹೆಚ್.ಎಸ್.ಶಿವಶಂಕರ್ 2 ನಾಮಪತ್ರ, ಆಮ್ ಆದ್ಮಿ ಪಾರ್ಟಿ ಗಣೇಶಪ್ಪ ದುರ್ಗದ, ಪಕ್ಷೇತರ ಪರಶುರಾಮ ಎಂ. ಸೇರಿ ಇದುವರೆಗೆ 11 ನಾಮಪತ್ರಗಳು ಸಲ್ಲಿಕೆಯಾಗಿವೆ.

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಹೆಚ್.ನಾಗರಾಜ, ಪಕ್ಷೇತರರಾಗಿ ರುದ್ರೇಶ ಕೆ.ಹೆಚ್, ಕೀರ್ತಿಕುಮಾರ್ ಕೆ.ಎಸ್, ಶ್ರೀಕಾಂತ ಎಂ. ಸೇರಿ ಇದುವರೆಗೆ 17 ನಾಮಪತ್ರಗಳು ಸಲ್ಲಿಕೆಯಾಗಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಅಜಯ್ ಕುಮಾರ್ ಬಿ.ಜಿ 2 ನಾಮಪತ್ರ, ಬಹುಜನ ಸಮಾಜ ಪಾರ್ಟಿಯ ಮೊಹ್ಮದ್ ಕಲೀಂ, ಪಕ್ಷೇತರರಾಗಿ ಬಿ.ರಾಜಶೇಖರ್, ಬರ್ಕತ್ ಅಲಿ ಸೇರಿ 18 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಾಯಕೊಂಡ ಪ.ಜಾತಿ ಮೀಸಲು ಕ್ಷೇತ್ರಕ್ಕೆ ಬಿಜೆಪಿಯ ಎಂ.ಬಸವರಾಜ ನಾಯ್ಕ್, ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯ ಎನ್.ಶಾಂತಾಬಾಯಿ, ಉತ್ತಮ ಪ್ರಜಾ ಕೀಯ ಪಾರ್ಟಿಯ ಚೇತನ್‍ಕುಮಾರ್ ನಾಯ್ಕ್‌, ಪಕ್ಷೇತರ ರಾಗಿ ವಾಗೀಶ ಬಿ.ಎಂ, ಎ.ಕೆ.ಗಣೇಶ, ಶಿವಪ್ರಕಾಶ್ ಆರ್.ಎಲ್, ಪಿ.ಆರ್.ಶ್ರೀನಿವಾಸ್, ಮಂಜುನಾಥ ಎ.ಕೆ. ಸೇರಿ 23 ನಾಮಪತ್ರಗಳು ಸಲ್ಲಿಕೆಯಾಗಿವೆ.

ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್.ಎಸ್.ಶಿವಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಸವರಾಜು ವಿ.ಶಿವಗಂಗಾ, ಪಕ್ಷೇತರ ಚಂದ್ರಪ್ಪ.ವಿ ಸೇರಿ 12 ನಾಮಪತ್ರಗಳು ಸಲ್ಲಿಕೆಯಾಗಿವೆ.

ಹೊನ್ನಾಳಿ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎ.ಕೆ.ಹನುಮಂತಪ್ಪ ನಾಮಪತ್ರ ಸಲ್ಲಿಸಿದ್ದು ಇದುವರೆಗೆ 7 ನಾಮಪತ್ರಗಳು ಸಲ್ಲಿಕೆಯಾಗಿವೆ.

error: Content is protected !!