ದಾವಣಗೆರೆ,ಏ.18- ವಿಧಾನಸಭಾ ಸಾರ್ವತ್ರಿಕ ಚುನಾ ವಣೆ ನಡೆಯುತ್ತಿದ್ದು ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಲ್ಲಿ ನಾಮಪತ್ರಗಳಲ್ಲಿ ಏಪ್ರಿಲ್ 18 ರವರೆಗೆ 66 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಮಂಗಳವಾರ ಜಗಳೂರು ಪಟ್ಟಣ ಪಂಚಾಯ್ತಿ ಮೀಸಲು ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಬಿ .ದೇವೇಂದ್ರಪ್ಪ ಹಾಗೂ ಪಕ್ಷೇತರವಾಗಿ ಹೆಚ್.ಪಿ.ರಾಜೇಶ್ ಸೇರಿ ಇದುವರೆಗೆ 5 ನಾಮಪತ್ರಗಳು ಸಲ್ಲಿಕೆಯಾಗಿವೆ.
ಹರಿಹರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿಯ ಬಿ.ಪಿ.ಹರೀಶ್ 2 ನಾಮಪತ್ರ, ಉತ್ತಮ ಪ್ರಜಾಕೀಯ ಪಾರ್ಟಿ ಯಿಂದ ಕೃಷ್ಣ ಎಂ. ಒಟ್ಟು 5 ನಾಮಪತ್ರಗಳು ಸಲ್ಲಿಕೆಯಾಗಿವೆ.
ದಾವಣಗೆರೆ ಉತ್ತರ ಸಾಮಾನ್ಯ ಕ್ಷೇತ್ರದಿಂದ ಕೆ.ಜಿ.ಅಜ್ಜಪ್ಪ ಪಕ್ಷೇತರ, ಚಂದ್ರಶೇಖರ.ಬಿ ಉತ್ತಮ ಪ್ರಜಾಕೀಯ ಪಕ್ಷ, ಶ್ರೀಧರ್ ಪಾಟೀಲ್.ಸಿ ಆಮ್ ಆದ್ಮಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದು, ಇದುವರೆಗೆ 13 ನಾಮಪತ್ರಗಳು ಸಲ್ಲಿಕೆಯಾಗಿವೆ. ದಾವಣಗೆರೆ ದಕ್ಷಿಣ ಸಾಮಾನ್ಯ ಕ್ಷೇತ್ರದಲ್ಲಿ ಬಿ.ನಾಗೇಂದ್ರರಾವ್, ಈರಣ್ಣ, ನೌಶೀನ್ ತಾಜ್ ಇವರುಗಳು ಪಕ್ಷೇತರರಾಗಿ, ಈಶ್ವರ ಉತ್ತಮ ಪ್ರಜಾಕೀಯ ಪಕ್ಷದಿಂದ, ಭಾರತಿ.ಕೆ ಸೋಷಿಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಷ್ಟ್ ಪಕ್ಷ, ಹೆಚ್.ಕೆ.ದಾವಲ್ ಸಾಬ್ ಕರ್ನಾಟಕ ರಾಷ್ಟ್ರ ಸಮಿತಿಯಿಂದ ನಾಮಪತ್ರ ಸಲ್ಲಿಸಿದ್ದು, ಇಲ್ಲಿವರೆಗೆ 13 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮಾಯಕೊಂಡ ಎಸ್.ಸಿ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಎಂ.ಬಸವರಾಜನಾಯ್ಕ, ಲೋಕೇಶ್ ಪಿ.ಡಿ ಪಕ್ಷೇತರ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಕೆ.ಎಸ್.ಬಸವರಾಜ್ ಸೇರಿದಂತೆ ಇಲ್ಲಿಯವರೆಗೆ 15 ನಾಮಪತ್ರಗಳು ಸಲ್ಲಿಕೆಯಾಗಿವೆ.
ಚನ್ನಗಿರಿ ಸಾಮಾನ್ಯ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಬಸವರಾಜು ವಿ.ಶಿವಗಂಗಾ, ಚಂದ್ರಶೇಖರ.ಹೆಚ್ ಉತ್ತಮ ಪ್ರಜಾಕೀಯ ಪಾರ್ಟಿ, ಕುಬೇಂದ್ರಸ್ವಾಮಿ ಪಕ್ಷೇತರ, ಎಂ.ರೂಪ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಹೆಚ್.ಆರ್.ಹರೀಶ್ ಪಕ್ಷೇತರ ಸೇರಿ ಇದುವರೆಗೆ 9 ನಾಮಪತ್ರಗಳು ಸಲ್ಲಿಕೆಯಾಗಿವೆ.
ಹೊನ್ನಾಳಿ ಸಾಮಾನ್ಯ ಕ್ಷೇತ್ರಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಡಿ.ಜಿ.ಶಾಂತನಗೌಡ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಕಿರಣ್ ಎಲ್.ಎಸ್, ಡಿ.ಚಂದ್ರಶೇಖರಪ್ಪ ಪಕ್ಷೇತರ ಸೇರಿ ಇದುವರೆಗೆ 6 ನಾಮಪತ್ರಗಳು ಸಲ್ಲಿಕೆಯಾಗಿವೆ.