ಬಾಲಕನ ಹೃದಯ ಸಂಬಂಧಿ ಚಿಕಿತ್ಸೆಗೆ ಸಹಾಯ ಮಾಡಲು ಪೋಷಕರ ಮನವಿ

ದಾವಣಗೆರೆ, ಏ.18- ತಾಲ್ಲೂಕಿನ ಹೊನ್ನೂರು ಗ್ರಾಮದ ವಾಸಿ ಪರಮೇಶ ಅವರ ಮಗ ಮಣಿಕಂಠ ಎಂಬ 13 ವರ್ಷದ ಬಾಲಕನಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಪ್ರತಿ ದಿನ 5 ರಿಂದ 6 ಸಾವಿರ ರೂ. ವೆಚ್ಚವಾಗುತ್ತಿದೆ. ಬಾಲಕನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಹಾಗಾಗಿ ಚಿಕಿತ್ಸೆಗೆ ನೆರವು ನೀಡುವಂತೆ ಪೋಷಕರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರಿನ  ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದ್ದು, ದಾನಿಗಳು ಸಹಾಯ ಮಾಡುವಂತೆ ಪೋಷಕರು ಕೋರಿದ್ದಾರೆ. ಬ್ಯಾಂಕ್ ಹೆಸರು :- ಕರ್ನಾಟಕ ಬ್ಯಾಂಕ್, ದಾವಣಗೆರೆ ಪಿ.ಬಿ ರಸ್ತೆ ಶಾಖೆ ದಾವಣಗೆರೆ., ಖಾತೆದಾರರ ಹೆಸರು : ಪರಮೇಶ ಯು., ಖಾತೆ ಸಂಖ್ಯೆ: 2142500100 222201., ಐ.ಎಫ್‌.ಎಸ್‌.ಸಿ ಕೋಡ್‌ : ಕೆಎಆರ್‌ಬಿ0000214.  ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಸಂಖ್ಯೆ :  9535790993, 8904168207.

error: Content is protected !!