ಹರಿಹರ , ಏ. 18- ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಚಂದ್ರಗುಪ್ತ ಮೌರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜ್ (ಬೆಳ್ಳೂಡಿ) ಹಾಗೂ ಆದಿಕೇಶವ ಅಕಾಡೆಮಿ (ದಾವಣಗೆರೆ) ಇವರ ವತಿಯಿಂದ ನಗರದ ಗಿರಿಯಮ್ಮ ಕಾಲೇಜು ಆವರಣದಲ್ಲಿರುವ ಶ್ರೀ ಸಂಗಮೇಶ ಪ್ರೌಢ ಶಾಲೆಯಲ್ಲಿ ನಾಡಿದ್ದು ದಿನಾಂಕ 20 ರಿಂದ ಮೇ 20 ರವರೆಗೆ ಉಚಿತ ಬ್ರಿಡ್ಜ್ ಕೋರ್ಸ್ ಮಾಡಲಾಗುತ್ತಿದೆ. ವಿಜ್ಞಾನ ವಿಭಾಗ ಸೇರ ಬಯಸುವ ಆಸಕ್ತ ವಿದ್ಯಾರ್ಥಿಗಳಿಗಾಗಿ ಹಾಗೂ ಕೊರೊನಾ ಸಂದರ್ಭದಲ್ಲಿ 8 ಮತ್ತು 9 ನೇ ತರಗತಿಯಲ್ಲಿ ಕಲಿಯದೆ ಇರುವ ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಸೇರಿದಂತೆ ಹಾಗೂ ಮೂಲಭೂತ ಪರಿಕಲ್ಪನೆಗಳ ಜೊತೆಗೆ ನೀಟ್/ ಜೆಇಇ/ಕೆಸಿಇಟಿ/ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ಸಿದ್ದತೆ ಕುರಿತು ಈ ಬ್ರಿಡ್ಜ್ ಕೋರ್ಸ್ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗುವುದು. ವಿವರಕ್ಕೆ ಸಂಪರ್ಕಿಸಿ ದೂರವಾಣಿ : 9008526469 – 6360712877 – 9535250766.
January 9, 2025