ಜಿಲ್ಲೆಯ ಅಭ್ಯರ್ಥಿಗಳ ಪೈಕಿ ಶಾಮನೂರು ಶಿವಶಂಕರಪ್ಪ ಶ್ರೀಮಂತ ಅಭ್ಯರ್ಥಿ
ದಾವಣಗೆರೆ, ಏ. 17 – ಜಿಲ್ಲೆಯಲ್ಲಿ ಸೋಮವಾರ ಹಲವು ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳು ನಾಮಪತ್ರದ ವೇಳೆ ಸಲ್ಲಿಸಿ ರುವ ಆಸ್ತಿ ಹಾಗೂ ಹೊಣೆಗಾರಿಕೆ ವಿವರಗಳು :
ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ – ಕಾಂಗ್ರೆಸ್) : 257.83 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಮೂಲಕ 19.66 ಕೋಟಿ ರೂ.ಗಳ ಚರಾಸ್ತಿ ಮಾಲೀಕರಾಗಿದ್ದಾರೆ.
35 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಮೂಲಕ 25 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಒಟ್ಟು ಆಸ್ತಿ ಮೌಲ್ಯ 337.49 ಕೋಟಿ ರೂ. ಆಗಿದೆ.
15.71 ಕೋಟಿ ರೂ.ಗಳ ಹೊಣೆಗಾರಿಕೆ ಹೊಂದಿದ್ದಾರೆ. ಹಿಂದೂ ಅವಿಭಕ್ತ ಕುಟುಂಬದ ಮೂಲಕ ಹೊಂದಿರುವ ಹೊಣೆಗಾರಿಕೆ 2.02 ಕೋಟಿ ರೂ.
ಬಿ.ಜಿ. ಅಜಯ್ ಕುಮಾರ್ (ದಾವಣಗೆರೆ ದಕ್ಷಿಣ – ಬಿಜೆಪಿ) : 2.18 ಕೋಟಿ ರೂ.ಗಳ ಚರಾಸ್ತಿ ಇದೆ. ಪತ್ನಿ ಮಂಗಳ 36.20 ಲಕ್ಷ ರೂ., ಮಗಳು ಬಿ.ಎ. ನೇಹ 19.37 ಲಕ್ಷ ರೂ., ಮಗ ಎ.ಜಿ. ಭರತ್ 40.41 ಲಕ್ಷ ರೂ. ಹಾಗೂ ತಾಯಿ ಜಯಮ್ಮ 5 ಸಾವಿರ ರೂ. ಚರಾಸ್ತಿ ಹೊಂದಿದ್ದಾರೆ.
ಅಜಯ್ ಕುಮಾರ್ ಬಳಿ 8.72 ಕೋಟಿ ರೂ.ಗಳ ಸ್ಥಿರಾಸ್ತಿ ಇದೆ. ಪತ್ನಿ ಮಂಗಳ 40.10 ಲಕ್ಷ ರೂ., ಮಗಳು ನೇಹ 5 ಲಕ್ಷ ರೂ. ಹಾಗೂ ಮಗ ಭರತ್ 19 ಲಕ್ಷ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ.
ಅಜಯ್ ಕುಮಾರ್ ಹೊಣೆಗಾರಿಕೆ 1.02 ಕೋಟಿ ರೂ. ಮತ್ತು ಮಗ ಭರತ್ ಹೊಣೆಗಾರಿಕೆ 11.45 ಲಕ್ಷ ರೂ.
ಲೋಕಿಕೆರೆ ನಾಗರಾಜ್ (ದಾವಣಗೆರೆ ಉತ್ತರ – ಬಿಜೆಪಿ) : ಚರಾಸ್ತಿ ಮೌಲ್ಯ 4.48 ಕೋಟಿ ರೂ. ಹಾಗೂ ಪತ್ನಿ ಎನ್. ಲತಾ ಹೊಂದಿರುವ ಚರಾಸ್ತಿ 92.62 ಲಕ್ಷ ರೂ.
ನಾಗರಾಜ್ ಹೊಂದಿರುವ ಸ್ಥಿರಾಸ್ತಿ 8.92 ಕೋಟಿ ರೂ. ಅವರು ಹೊಂದಿರುವ ಹೊಣೆಗಾರಿಕೆ 3.47 ಕೋಟಿ ರೂ. ಪತ್ನಿ ಲತಾ ಹೊಣೆಗಾರಿಕೆ 12.90 ಲಕ್ಷ ರೂ.
ಹೆಚ್.ಎಸ್. ಶಿವಶಂಕರ್ (ಹರಿಹರ – ಜೆಡಿಎಸ್) : ಚರಾಸ್ತಿ ಮೌಲ್ಯ 1 ಕೋಟಿ ರೂ. ಸ್ಥಿರಾಸ್ತಿಗಳ ಒಟ್ಟು ಮೌಲ್ಯ 7.48 ಕೋಟಿ ರೂ. ಹಾಗೂ ಹೊಣೆಗಾರಿಕೆಗಳು 64.65 ಲಕ್ಷ ರೂ.
ಡಿ.ಜಿ. ಶಾಂತನಗೌಡ (ಹೊನ್ನಾಳಿ – ಕಾಂಗ್ರೆಸ್) : ಚರಾಸ್ತಿ ಮೌಲ್ಯ 69.05 ಲಕ್ಷ ರೂ. ಹಾಗೂ ಸ್ಥಿರಾಸ್ತಿ ಮೌಲ್ಯ 39.49 ಲಕ್ಷ ರೂ.
ಪತ್ನಿ ರತ್ನಮ್ಮ ಹೊಂದಿರುವ ಚರಾಸ್ತಿ 67.87 ಲಕ್ಷ ರೂ. ಮಗ ಡಿ.ಎಸ್. ಪ್ರದೀಪ್ 1.51 ಕೋಟಿ ರೂ., ಸುರೇಂದ್ರ 1.09 ಕೋಟಿ ರೂ., ಸೊಸೆ ಪಿ. ಸೌಮ್ಯ 81.51 ಲಕ್ಷ ರೂ. ಹಾಗೂ ಸೊಸೆ ಎ.ಎನ್. ವಾಣಿ ಹೊಂದಿರುವ ಚರಾಸ್ತಿ 1.44 ಕೋಟಿ ರೂ.
ಶಾಂತನಗೌಡ ಹೊಣೆಗಾರಿಕೆ 28.72 ಲಕ್ಷ ರೂ. ಪತ್ನಿ ರತ್ನಮ್ಮ 1.75 ಲಕ್ಷ ರೂ., ಮಗ ಡಿ.ಎಸ್. ಪ್ರದೀಪ್ 2.50 ಲಕ್ಷ ರೂ., ಸುರೇಂದ್ರ 3.41 ಕೋಟಿ ರೂ. ಹಾಗೂ ಸೊಸೆ ವಾಣಿ ಹೊಣೆಗಾರಿಕೆ 48 ಲಕ್ಷ ರೂ. ಆಗಿದೆ.
ಹೆಚ್. ಆನಂದಪ್ಪ (ಮಾಯಕೊಂಡ – ಜೆಡಿಎಸ್) : ಚರಾಸ್ತಿಯ ಮೌಲ್ಯ 57.45 ಲಕ್ಷ ರೂ., ಪತ್ನಿ ನಿರ್ಮಲಮ್ಮ 30.31 ಲಕ್ಷ ರೂ., ಮಗ ಮಲ್ಲಿಕಾರ್ಜುನ 1.62 ಕೋಟಿ ರೂ., ಮಗ ರುದ್ರೇಶ್ ಚರಾಸ್ತಿ ಮೌಲ್ಯ 22.53 ಲಕ್ಷ ರೂ.
ಆನಂದಪ್ಪ ಹೊಂದಿರುವ ಸ್ಥಿರಾಸ್ತಿ ಮೌಲ್ಯ 7.10 ಕೋಟಿ ರೂ.. ಪತ್ನಿ ನಿರ್ಮಲಮ್ಮ 5 ಕೋಟಿ ರೂ. ಹಾಗೂ ಮಗ ಮಲ್ಲಿಕಾರ್ಜುನ 8 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ಎಂ. ಬಸವರಾಜ ನಾಯ್ಕ (ಮಾಯಕೊಂಡ – ಬಿಜೆಪಿ ) : 27 ಲಕ್ಷ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಪತ್ನಿ 55 ಲಕ್ಷ ರೂ. ಚರಾಸ್ತಿ ಹೊಂದಿದ್ದಾರೆ. ಬಸವರಾಜನಾಯ್ಕ ಹೊಂದಿರುವ ಸ್ಥಿರಾಸ್ತಿ 4 ಕೋಟಿ ರೂ. ಹಾಗೂ ಪತ್ನಿ 12 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
ಕೆ.ಎಸ್. ಬಸವಂತಪ್ಪ (ಮಾಯಕೊಂಡ – ಕಾಂಗ್ರೆಸ್) : ಚರಾಸ್ತಿಯ ಮೌಲ್ಯ 18.70 ಲಕ್ಷ ರೂ. ಪತ್ನಿ ಮಮತ ಚರಾಸ್ತಿ 4.61 ಲಕ್ಷ ರೂ. ಬಸವಂತಪ್ಪ ಹೊಂದಿರುವ ಸ್ಥಿರಾಸ್ತಿ ಮೌಲ್ಯ 78 ಲಕ್ಷ ರೂ. ಹಾಗೂ ಹೊಣೆಗಾರಿಕೆ 3.25 ಲಕ್ಷ ರೂ.
ಎಸ್.ವಿ. ರಾಮಚಂದ್ರ (ಜಗಳೂರು – ಬಿಜೆಪಿ) : ಹೊಂದಿರುವ ಚರಾಸ್ತಿ ಮೌಲ್ಯ 4.02 ಕೋಟಿ ರೂ., ಪತ್ನಿ ಎಸ್.ಆರ್. ಇಂದಿರಾ ಚರಾಸ್ತಿ 54.18 ಲಕ್ಷ ರೂ. ಮತ್ತು ಮಗ ಅಜಯೇಂದ್ರ ಸಿಂಹ ಹೊಂದಿರುವ ಚರಾಸ್ತಿ 4.95 ಲಕ್ಷ ರೂ.
ರಾಮಚಂದ್ರ ಹೊಂದಿರುವ ಸ್ಥಿರಾಸ್ತಿ ಮೌಲ್ಯ 9.33 ಕೋಟಿ ರೂ., ಪತ್ನಿ ಇಂದಿರಾ ಹೊಂದಿರುವ ಸ್ಥಿರಾಸ್ತಿ ಮೌಲ್ಯ 70 ಲಕ್ಷ ರೂ.
ರಾಮಚಂದ್ರ ಅವರ ಹೊಣೆಗಾರಿಕೆ 2.99 ಕೋಟಿ ರೂ. ಹಾಗೂ ಇಂದಿರಾ ಅವರ ಹೊಣೆಗಾರಿಕೆಗಳ ಮೌಲ್ಯ 92.97 ಲಕ್ಷ ರೂ.