ಭರಮಸಾಗರ, ಏ. 17 – ಸ್ಥಳೀಯ ಪ್ರೌಢಶಾಲೆ ಮುಖ್ಯ ಶಿಕ್ಷಕರ ಮತ್ತು ಸಿಬ್ಬಂದಿ ಕಚೇರಿ ಕೊಠಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಕರಗಳು ಹಾಗೂ ದಾಖಲೆಗಳು ಸುಟ್ಟು ಕರಕಲಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳಗ್ಗೆ ಶಾಲೆ ಬಳಿ ಬಂದ ಸಹ ಶಿಕ್ಷಕ ಅನಿಲ್ಕುಮಾರ್ಗೆ ಮುಖ್ಯ ಶಿಕ್ಷಕರ ಕಚೇರಿ ಕೊಠಡಿಗೆ ಬೆಂಕಿ ಬಿದ್ದಿರುವುದು ಕಂಡಿತು. ತಕ್ಷಣ ಎಸ್ಡಿಎಂಸಿ ಅಧ್ಯಕ್ಷ ಸೂರಪ್ಪ, ರಶೀದ್ ಮತ್ತು ಹಳೆ ವಿದ್ಯಾರ್ಥಿಗಳ ಸಹಾಯದೊಂದಿಗೆ ಸೇರಿ ಬೆಂಕಿ ನಂದಿಸಿದ್ದಾರೆ.
ಬಿಇಓ ಗಿರಿಜಮ್ಮ , ತಾಲ್ಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎ. ಮಲ್ಲಿಕಾರ್ಜುನ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು. ಇದು ಕಿಡಿಗೇಡಿಗಳ ಕೃತ್ಯವಾಗಿದೆ.
ಕೆಲ ದಿನಗಳ ಹಿಂದೆ ಶೌಚಾಲಯದ ಬಾಗಿಲುಗಳನ್ನು ಮುರಿದು ಹಾಕಲಾಗಿತ್ತು ಎಂದು ಮುಖ್ಯ ಶಿಕ್ಷಕ ಮುಬಾರಕ್ ಬಿಇಒ ಗೆ ತಿಳಿಸಿದರು.