ರಾಣೇಬೆನ್ನೂರಿನಲ್ಲಿ ನಾಳೆ ಕಾಶಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ

ರಾಣೇಬೆನ್ನೂರಿನಲ್ಲಿ ನಾಳೆ ಕಾಶಿ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ - Janathavaniರಾಣೇಬೆನ್ನೂರು, ಏ. 14- ಶ್ರೀ ಹಿರೇಮಠ ಸಂಸ್ಕೃತಿ ಸಂರಕ್ಷಣಾ ಸಮಿತಿ ವತಿಯಿಂದ ರಾಷ್ಟ್ರದ ಎರಡನೇ, ರಾಜ್ಯದ ಮೊದಲನೇಯದಾಗಿರುವ ನಗರದ ಹೊರವಲಯದ ಶ್ರೀ ಶನೇಶ್ಚರ ಸ್ವಾಮಿಯ ಬಯಲು ಆಲಯ ದ್ವಾದಶ ಪ್ರತಿಷ್ಠಾ ಮಹೋತ್ಸವದ ನಿಮಿತ್ತ ಲೋಕ ಕಲ್ಯಾಣಾರ್ಥ ಹಾಗೂ ಪ್ರಾಚೀನ ಧರ್ಮ ಪರಂಪರೆಯ ಸಂವರ್ಧನೆಗಾಗಿ ನಿರಂತರ 593 ದಿನಗಳ ಕಾಲ ಜರುಗುವ ಅಷ್ಟಬಂಧ ಬ್ರಹ್ಮ ಕಲಶೋತ್ಸವ, ಶ್ರೀ ಮಹಾತಪಸ್ವಿ ಸಿದ್ದಲಿಂಗ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ನಾಡಿದ್ದು ದಿನಾಂಕ 16ರಂದು ಮಧ್ಯಾಹ್ನ  12 ಘಂಟೆಗೆ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜಂಗಮರಾಧನೆ, ಮನುಕುಲ ಧರ್ಮ ಸಮಾರಂಭವು ನಡೆಯಲಿದೆ. 

ಇದಕ್ಕೂ ಮುನ್ನ  ಇಲ್ಲಿನ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನದಿಂದ ಉತ್ಸವ ಆರಂಭವಾಗುವುದು. ಅಂದು ಸಂಜೆ 5 ಗಂಟೆಗೆ ಯಾಗ ಶಾಲೆ ಪ್ರವೇಶೋತ್ಸವ, ಮತ್ತು 593 ದಿನಗಳ ಕಾಲ ಜರುಗುವ ಧಾರ್ಮಿಕ ಸಮಾರಂ ಭಕ್ಕೆ ವಿಧ್ಯುಕ್ತ ಚಾಲನೆ, ಧರ್ಮ ಧ್ವಜಾರೋಹಣ, ಕಂಕಣಾರಾಧನೆ ನಡೆಯಲಿದೆ ಎಂದು ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

error: Content is protected !!