ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇಂದು ಚಿತ್ರಕಲಾ ಪ್ರಾತ್ಯಕ್ಷಿಕೆ

ದೃಶ್ಯಕಲಾ ಮಹಾವಿದ್ಯಾಲಯದ ವತಿಯಿಂದ ಇಂದು  ವಿಶ್ವಕಲಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಚಿತ್ರಕಲಾವಿದ ಬಿ. ಅಚ್ಯುತಾನಂದ ಅವರಿಂದ ಚಿತ್ರಕಲಾ ಪ್ರಾತ್ಯಕ್ಷಿಕೆ ನಡೆಯಲಿದೆ.

ದಾವಣಗೆರೆ ವಿವಿ ಕುಲಸಚಿವ (ಮೌಲ್ಯಮಾಪನ) ಡಾ. ಕೆ. ಶಿವಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ದಾವಣಗೆರೆ ವಿವಿ ಕಲಾ ನಿಕಾಯದ ಡೀನ್ ಡಾ. ವೆಂಕಟರಾವ್ ಪಲಾಟೆ ಉಪಸ್ಥಿತರಿರಲಿದ್ದಾರೆ.

ದೃಶ್ಯಕಲಾ ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶ್‌ ಕುಮಾರ್ ಪಿ. ವಲ್ಲೇಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಫ್ಯಾಷನ್ ಡಿಸೈನ್ ಅಧ್ಯಯನ ವಿಭಾಗದ ಡಾ. ಜೈರಾಜ್‌ ಎಂ. ಚಿಕ್ಕಪಾಟೀಲ, ಬೋಧನಾ ಸಹಾಯಕ ಡಾ. ಸಂತೋಷ ಕುಮಾರ್ ಕುಲಕರ್ಣಿ ಉಪಸ್ಥಿತರಿರುವರು.

error: Content is protected !!