ಸಿಇಟಿ, ನೀಟ್: ಮಾಜಿ ಸೈನಿಕರ ಮಕ್ಕಳಿಗೆ ದೃಢೀಕರಣ ಪತ್ರ ಕಡ್ಡಾಯ

ದಾವಣಗೆರೆ, ಏ. 13-   ಸಿ.ಇ.ಟಿ ಮತ್ತು ನೀಟ್‍ನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಜಿ ಸೈನಿಕರ ಮಕ್ಕಳು ಮೀಸಲಾತಿ ಪಡೆಯಲು ಮಾಜಿ ಸೈನಿಕ ದೃಢೀಕರಣ ಪತ್ರವನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಪಡೆಯುವುದು ಕಡ್ಡಾಯವಾಗಿದೆ. ಪ್ರಸ್ತುತ ಸರ್ಕಾರಿ ನೌಕರರು, ಅಧಿಕಾರಿಗಳನ್ನು ಚುನಾವಣಾ ಕಾರ್ಯಗಳಲ್ಲಿ ಬಳಸಿಕೊಳ್ಳಬಹುದಾದ ಕಾರಣಗಳಿಂದ ಸಿ.ಇ.ಟಿ, ನೀಟ್‍ನಲ್ಲಿ  ಮೀಸಲಾತಿ ಕೋರಿರುವ ಎಲ್ಲಾ ಮಾಜಿ ಸೈನಿಕರು ಕೊನೆಯ ದಿನಾಂಕದವರೆಗೆ ಕಾಯದೇ   ದೃಢೀಕರಣ ಪತ್ರವನ್ನು  ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

error: Content is protected !!