ದಾವಣಗೆರೆ,ಏ.13 – ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು ನೀತಿ ಸಂಹಿತೆ ಕಟ್ಟುನಿಟ್ಟಿನ ಜಾರಿಗೆ 29 ಕಡೆ ಚೆಕ್‌ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಚೆಕ್‍ಪೋಸ್ಟ್‍ಗಳಲ್ಲಿ ಸಿಬ್ಬಂದಿಗಳು ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿವೆ. ಮತ್ತು ಇದರ ನೇರ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದರ ದೃಶ್ಯಾವಳಿಗಳ ವೀಕ್ಷಣೆ ಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯಲ್ಲಿ ವೀಕ್ಷಣೆ ಮಾಡಲಾಗುತ್ತದೆ. ಮತ್ತು ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ರಕ್ಷಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿಗಳು ಮೊಬೈಲ್‍ನಲ್ಲಿಯು ವೀಕ್ಷಣೆ ಮಾಡುವರು ಎಂದರು.
ಕ್ಷೇತ್ರವಾರು ಚೆಕ್‍ಪೋಸ್ಟ್‍ಗಳ ವಿವರ:
ಜಗಳೂರು ವಿಧಾನಸಭಾ ಕ್ಷೇತ್ರ; ಬಿದರಕೇರೆ ಚೆಕ್ ಪೋಸ್ಟ್, ಗಡಿಮಾಕುಂಟೆ, ಮುಸ್ಟೂರು ಚಳ್ಳಕೆರೆ ರೋಡ್, ಕಾನನಕಟ್ಟೆ ರೋಡ್ ಚೆಕ್ ಪೋಸ್ಟ್.
ಹರಿಹರ ವಿಧಾನಸಭಾ ಕ್ಷೇತ್ರ; ರಾಘವೇಂದ್ರ ಮಠ, ಹಲಸಬಾಳು ಕ್ರಾಸ್, ಕುರುಬರಹಳ್ಳಿ, ಮಲೇಬೆನ್ನೂರಿನ ನಂದಿಗುಡಿ ಚೆಕ್ ಪೋಸ್ಟ್,
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ; ಭೂಮಿಕ ನಗರ ಚೆಕ್ ಪೋಸ್ಟ್, ಲೋಕಿಕೆರೆ, ಶಾಮ ನೂರು ಕ್ರಾಸ್ ರೋಡ್, ವಿದ್ಯಾನಗರ ಲಾಸ್ಟ್ ಬಸ್ ಸ್ಟಾಂಡ್, ಮಾಗಾನಹಳ್ಳಿ ರೋಡ್ ಚೆಕ್ ಪೋಸ್ಟ್.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ; ಬಾಡ ಕ್ರಾಸ್, ಬೇತೂರ್ ರೋಡ್, ಕೊಂಡಜ್ಜಿ ರೋಡ್, ಹರಿಹರ ರೋಡ್ (ಸಾಯಿ ಇಂಟರ್ ನ್ಯಾಷನಲ್) ಚೆಕ್ ಪೋಸ್ಟ್.
ಮಾಯಕೊಂಡ ವಿಧಾನಸಭಾ ಕ್ಷೇತ್ರ; ಹೆಬ್ಬಾಳ್ ಟೋಲ್‍ಗೆಟ್ ಚೆಕ್ ಪೋಸ್ಟ್, ಕಾರಿಗನೂರು ಕ್ರಾಸ್, ಹೆಚ್.ಬಸಾಪುರ,
ಚನ್ನಗಿರಿ ವಿಧಾನಸಭಾ ಕ್ಷೇತ್ರ; ಜೋಳದಾಳ್ ಚೆಕ್ ಪೋಸ್ಟ್, ಮಾವಿನಕಟ್ಟೆ, ತಾವರೆಕೆರೆ, ಮಾದಾಪುರ, ಸಂತೆಬೆನ್ನೂರು ಚೆಕ್ ಪೋಸ್ಟ್.
ಹೊನ್ನಾಳಿ ವಿಧಾನಸಭಾ ಕ್ಷೇತ್ರ; ಟಿ.ಜಿ ಹಳ್ಳಿ ಕ್ರಾಸ್ ಚೆಕ್ ಪೋಸ್ಟ್, ಸವಳಂಗ, ಹೊಳೆಹರಳಹಳ್ಳಿ ಕ್ರಾಸ್, ಜೀನಹಳ್ಳಿ ಕ್ರಾಸ್‍ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.