ದಾವಣಗೆರೆ, ಏ.12- ನಗರದ 12ನೇ ವಾರ್ಡ್‍ನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಉರುಬಾನು ಮತ್ತು ಮಾಜಿ ಸದಸ್ಯ ಶಫೀಕ್ ಪಂಡಿತ್ ಅವರ ನೇತೃತ್ವದಲ್ಲಿ ಇಲ್ಲಿನ ಅಹ್ಮದ್ ನಗರದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಇಫ್ತಿಯಾರ್ ಕೂಟದಲ್ಲಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ರಂಜಾನ್ ಮಾಸದಲ್ಲಿ ಮಕ್ಕಳು, ಮಹಿಳೆಯರು ಎನ್ನದೇ ಪ್ರತಿಯೊಬ್ಬರೂ ಉಪವಾಸ ಆಚರಣೆ ಮಾಡಲಿದ್ದು, ಸಂಜೆ ಸೂರ್ಯಾಸ್ತದ ಉಪವಾಸ ಬಿಡುವ ವೇಳೆ ಇಫ್ತಿಯಾರ್ ಕೂಟ ನಡೆಸುವರು. ಇಂತಹ ಪವಿತ್ರ ಕಾರ್ಯದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಬೀನಾತಾಜ್, ರೇಷ್ಮಾ, ತಾಸಿನ್ ಫಾತಿಮಾ, ಸಯೀದಾ ಮಿಜಾಬ್, ಮಹಾನಗರ ಪಾಲಿಕೆ ಸದಸ್ಯ ಜಾಕಿರ್ ಅಲಿ, ಲಾಲ್‍ಪೈಲ್ವಾನ್, ಮುನ್ನಾ, ರಿಯಾಜ್, ನವೀದ್, ಖಲೀಮುಲ್ಲಾ, ಮಹ್ಮದ್ ಅಲಿ ಮತ್ತಿತರರಿದ್ದರು.