15 ರಿಂದ ಅನಧಿಕೃತ ಪಂಪ್‌ಸೆಟ್ ತೆರವುಗೊಳಿಸಲು ಸೂಚನೆ

ದಾವಣಗೆರೆ, ಏ. 12- ಬೇಸಿಗೆ ಹಂಗಾಮಿಗಾಗಿ ಕಾಲುವೆಯಲ್ಲಿ ನೀರು ಹರಿಸಲಾಗುತ್ತಿದ್ದು, ನೀರನ್ನೆತ್ತಲು ಕಾಲುವೆಗೆ ಅನಧಿಕೃತ ಪಂಪ್‌ಸೆಟ್ ಗಳನ್ನು ಬೆಸ್ಕಾಂ, ಪೊಲೀಸ್, ನೀರಾವರಿ, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳ ಸಹಯೋಗದೊಂದಿಗೆ ಸೂಕ್ತ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಇದೇ ದಿನಾಂಕ 15 ರಿಂದ ಅನಧಿಕೃತ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಪ್ರಾರಂಭಿಸಲು ಯೋಜಿಸಲಾಗಿದ್ದು, ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಶಾಖಾ ಕಾಲುವೆ 0.00 ಕಿಮೀ ಯಿಂದ 30.00 ಕಿಮೀವರೆಗೆ ಅನಧಿಕೃತ ಪಂಪ್‌ಸೆಟ್ ತೆರವುಗೊಳಿಸುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿರುತ್ತದೆ. ಆದ ಕಾರಣ ಅನಧಿಕೃತವಾಗಿ ನೀರನ್ನು ಎತ್ತಿಕೊಳ್ಳಲು ಅಳವಡಿಸಲಾಗಿರುವ ಪಂಪ್‌ಸೆಟ್‌ಗಳನ್ನು ತಕ್ಷಣ ತೆರವುಗೊಳಿಸಲು ಸೂಚಿಸಿದೆ. ತಪ್ಪಿದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ 1965 ರನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತ್ಯಾವಣಗಿ ಭದ್ರಾ ನಾಲಾ ಉಪ ವಿಭಾಗದ ಇಂಜಿನಿಯರ್ ತಿಳಿಸಿದ್ದಾರೆ. 

error: Content is protected !!