ಅಕ್ರಮ ಮದ್ಯ: ಅಬಕಾರಿ ಇಲಾಖೆ ದಾಳಿ

ಅಕ್ರಮ ಮದ್ಯ: ಅಬಕಾರಿ ಇಲಾಖೆ ದಾಳಿ

ದಾವಣಗೆರೆ  ಏ. 12 – ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ 9,96,542 ರೂ. ಮೌಲ್ಯದ ಅಕ್ರಮ ಮದ್ಯ, ಬಿಯರ್ ಹಾಗೂ ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆಯಿಂದ ಜಪ್ತು ಪಡಿಸಿಕೊಂಡು ಈ ಸಂಬಂಧ ಒಟ್ಟಾರೆ 101 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾಳಿ ನಡೆಸಲಾಗಿದೆ.ಮಾರ್ಚ್ 29 ರಿಂದ ಏಪ್ರಿಲ್ 9 ರವರೆಗೆ 556.335 ಲೀ. ಮದ್ಯ, 70.870 .ಲೀ. ಬಿಯರ್ ಹಾಗೂ 20 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 9,96,542 ರೂ. ಮೊತ್ತದ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.

 ಮದ್ಯ ಸಾಗಾಣಿಕೆ/ದಾಸ್ತಾನು ಕುರಿತಂತೆ 27 ಘೋರ ಮೊಕದ್ದಮೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಕುರಿತು 55  ಮೊಕದ್ದಮೆಗಳು ಹಾಗೂ ಮದ್ಯದಂಗಡಿಗಳಲ್ಲಿನ ಸನ್ನದು   ಷರತ್ತುಗಳ ಉಲ್ಲಂಘನೆಗಾಗಿ 19 ಬಿ.ಎಲ್.ಸಿ ಮೊಕದ್ದಮೆಗಳನ್ನು ಒಳಗೊಂಡಂತೆ ಒಟ್ಟಾರೆಯಾಗಿ 101 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

error: Content is protected !!