ಹರಿಹರ, ಏ. 12 – ವಿಧಾನಸಭಾ ಚುನಾವಣೆಯ ನಿಮ್ಮಿತ್ತವಾಗಿ ನಗರದ ಸೆಂಟ್ ಮೇರಿಸ್ ಶಾಲೆ ಆವರಣದಲ್ಲಿ ವಿದ್ಯುನ್ಮಾನ ಮತಯಂತ್ರಗಳು ಹಾಗೂ ವಿ.ವಿ. ಪ್ಯಾಡ್‌ಗಳು, 274ಬಿವಿ (28) ಬಾಕ್ಸ್, 274 ಸಿ.ಯು. (28) ಬಾಕ್ಸ್ ಹಾಗೂ 257 ವಿ.ವಿ. ಪ್ಯಾಡ್ ತಾತ್ಕಾಲಿಕ ಭದ್ರತಾ ಕೊಠಡಿಯಲ್ಲಿ ಚುನಾವಣೆ ಅಧಿಕಾರಿ ಉದಯ್ ಕುಂಬಾರ್, ತಹಶೀಲ್ದಾರ್ ಪೃಥ್ವಿ ಸಾನಿಕಂ ಪೌರಾಯುಕ್ತ ಐಗೂರು ಬಸವರಾಜ್, ಪಿಸಿಐ ವೀಣಾ ಮತ್ತು ವಿವಿಧ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಇರಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ಉದಯ್ ಕುಮಾರ್ ಕುಂಬಾರ, ತಹಶೀಲ್ದಾರ್ ಪೃಥ್ವಿ ಸಾನಿಕಂ, ಪೌರಾಯುಕ್ತ ಐಗೂರು ಬಸವರಾಜ್, ಪಿಸಿಐ ಹೆಚ್.ಕೆ. ವೀಣಾ, ತಹಶೀಲ್ದಾರ್ ಕಚೇರಿಯ ಸಿಬ್ಬಂದಿಗಳಾದ ಅಶೋಕ, ಹೆಚ್.ಜಿ. ಹೇಮಂತ್ ಕುಮಾರ್, ಸೋಮಶೇಖರ್, ಉಮೇಶ್, ವಿಜಯ ಮಹಾಂತೇಶ್, ಮಂಜುನಾಥ್, ಪ್ರಶಾಂತ್, ಫೈರೋಜ್, ಆರೋಗ್ಯ ಇಲಾಖೆ ಗುರುಪ್ರಸಾದ್, ಪೋಲೀಸ್ ರವಿ, ಜೆಡಿಸ್ ಪಕ್ಷದ ಆಸೀಫ್ ಕನವಳ್ಳಿ, ಆಮ್ ಆದ್ಮಿ ಪಕ್ಷದ ಗಣೇಶ ದುರ್ಗದ, ನಗರಸಭೆ ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.