ಬೇಸಿಗೆಯ ಹಿನ್ನೆಲೆಯಲ್ಲಿ ಸಾಮಾಜಿಕ ಸೇವಾ ಸಂಸ್ಥೆ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನೊಂದಿಗೆ 1 ತಿಂಗಳ ಪರ್ಯಂತ ಸಾರ್ವಜನಿಕರಿಗೆ ಉಚಿತ ಮಜ್ಜಿಗೆ ವಿತರಿಸುವ ಕಾರ್ಯಕ್ರಮವನ್ನು ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ಹಮ್ಮಿಕೊಳ್ಳ ಲಾಗಿದೆ. ನಿವೃತ್ತ ಅಭಿಯಂತರರಾದ ಎನ್. ರೇವಣಸಿದ್ದಪ್ಪ ಅವರು ಇಂದಿನ ಮಜ್ಜಿಗೆ ದಾನಿಗಳಾಗಿದ್ದಾರೆ ಎಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ. ಕರುಣಾ ಜೀವ ಕಲ್ಯಾಣ ಟ್ರಸ್ಟಿನ ಸತ್ಕಾರ್ಯಗಳಾದ ಮಜ್ಜಿಗೆ, ಗಾಡಿ, ಸೈಕಲ್, ನೀರಿನ ಬಾನಿ ವಿತರಣೆ ಇತ್ಯಾದಿಗಳಿಗೆ ದಾನ ಮಾಡಲಿಚ್ಚಿಸುವವರು ಎಂ.ಬಿ. ಮಧುಸೂದನ್ (98806 -02121ಅಥವಾ 95380-24444) ಅವರನ್ನು ಸಂಪರ್ಕಿಸಬಹುದು.
January 13, 2025