ರಾಣೇಬೆನ್ನೂರು, ಏ.12- ಶ್ರೀರಾಮ ನಗರ ದಲ್ಲಿರುವ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆಯ ಅಂಧ ವಿದ್ಯಾರ್ಥಿನಿ ಕು. ಗಂಗವ್ವ ನೀಲಪ್ಪ ಹರಿಜನ ಅವರು ಭಾರತ ಅಂಧರ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿಯಾಗಿ ಆಯ್ಕೆಯಾಗಿ ಹಾವೇರಿ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ. ಭಾರತ ಅಂಧರ ಕ್ರಿಕೆಟ್‌ಗೆ ಆಯ್ಕೆಯಾಗಿ ಸಂಸ್ಥೆಗೆ ಹೆಸರು ಮತ್ತು ಕೀರ್ತಿ ತಂದಿದ್ದಾಳೆ. ಇವರಿಗೆ ಸಂಸ್ಥೆಯ ಆಡಳಿತ ಮಂಡಳಿ, ಸಂಸ್ಥೆಯ ಧರ್ಮದರ್ಶಿಗಳಾದ ಕೆ.ಜಿ.ಮೋಹನ್ ಮತ್ತು ಡಾ.ಪಾಲ್ ಮುದ್ದಾ ಅಭಿನಂದಿಸಿದ್ದಾರೆ.
January 11, 2025