ಹರಪನಹಳ್ಳಿ, ಏ. 12- ತಾಲ್ಲೂಕಿನ ಚಿಗಟೇರಿಯ ಶ್ರೀ ನಾರದಮುನಿ ಸ್ವಾಮಿಯ ರಥೋತ್ಸವವು ಮೂಲಾ ನಕ್ಷತ್ರದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಿನ್ನೆ ಜರುಗಿತು.
ನಾರದಮುನಿ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಅಣಬೇರು ರಾಜಣ್ಣ, ಪಾಲಿಕೆ ಮಾಜಿ ಸದಸ್ಯ ಶ್ಯಾಬನೂರಿನ ಸಂಕೋಳ್ ಚಂದ್ರಶೇಖರ್, ಕಲಪನಹಳ್ಳಿ ಬಸವಲಿಂಗಪ್ಪ, ಪಲ್ಲಾಗಟ್ಟಿ ನಾಗರಾಜ್, ಹೊಳಲ್ಕೆರೆ ವೇದಮೂರ್ತಿ, ಹುಣಸಿಹಳ್ಳಿ ಜಾತಪ್ಪ, ಇಂಜಿನಿಯರ್ ಜಿ.ಬಿ.ಸುರೇಶಕುಮಾರ್ ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಚಿತ್ರದುರ್ಗ-ದಾವಣಗೆರೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರೂ ಆದ ಶ್ರೀ ನಾರದಮುನಿ ಸೇವಾ ಟ್ರಸ್ಟ್ ಸದಸ್ಯ ಶಾಮನೂರು ಬಸಣ್ಣ ಮತ್ತು ಮಕ್ಕಳು
ಶ್ರೀ ನಾರದಮುನಿ ದೇವಸ್ಥಾನ ಮತ್ತು ರಥಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿಸಿದ್ದರು.