ದಾವಣಗೆರೆ, ಏ.12- ನಗರದ ಎಲಿಸವ್ವ ಜಾನಪದ ಕಲಾ ತಂಡದಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಂಡದ ಅಧ್ಯಕ್ಷರಾದ ಮೀನಾಕ್ಷಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ಶಿಕ್ಷಕಿ ಯರಾದ ವಿಜಯಮ್ಮ, ಕನ್ಯಾಕುಮಾರಿ, ಸ್ವರ್ಣಲತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಂಡದ ಪದಾಧಿಕಾರಿಗಳಾದ ಜ್ಯೋತಿ, ದೀಪಕ್, ಪವಿತ್ರ, ಚಂದ್ರಕಲಾ, ಮಮತಾ ಕಣವಿ, ಮಧು ಉಮೇಶ್, ಪ್ರೀತಿ ಉಪಸ್ಥಿತರಿದ್ದರು.
ಶೈಲಜಾ ಕೊಟ್ರೇಶ್ ಪ್ರಾರ್ಥಿಸಿದರು. ಮಂಗಳಾ ಮಲ್ಲಿಕಾರ್ಜುನ್ ಸ್ವಾಗತಿಸಿದರು. ಸುಜಾತ ನಾಗೇಶ್ ವಂದಿಸಿದರು. ಸುಧಾ ಸಂತೋಷ್ ನಿರೂಪಿಸಿದರು.