ಮಲೇಬೆನ್ನೂರು, ಏ.10- ದೇವರಬೆಳಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮದಲ್ಲಿ ಸೋಮವಾರ ಮತದಾರರಿಗೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಮತದಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಅವರು, ಆರೋಗ್ಯ ಕೇಂದ್ರಗಳ ವತಿಯಿಂದ ಪ್ರತಿ ಹಳ್ಳಿಯಲ್ಲೂ ಮತದಾನದ ಹಕ್ಕು ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ವೈದ್ಯಾಧಿಕಾರಿ ಡಾ. ನವ್ಯ, ಜಿಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜಪ್ಪ, ಆರೋಗ್ಯ ಸಿಬ್ಬಂದಿಗಳಾದ ಆದರ್ಶ, ಲಕ್ಷ್ಮಿ, ಸಬೀತಮ್ಮ, ಸುನೀತಾ, ರಾಮಾನಾಯ್ಕ, ಪೂಜಾ ಮತ್ತು ಆಶಾ ಕಾರ್ಯಕರ್ತರು ಈ ವೇಳೆ ಹಾಜರಿದ್ದರು.
January 8, 2025