ಮಾನ್ಯರೇ,
ಮಹಾನಗರ ಪಾಲಿಕೆ ಎದುರುಗಡೆ ಇರುವ ಕೆಳ ಸೇತುವೆ ಪಾದಚಾರಿಗಳ ಕಿರುದಾರಿಯಲ್ಲಿ ಬಿಎಸ್‌ಎನ್ಎಲ್ ಕಛೇರಿ ಬಳಿ ಸುಮಾರು ವರ್ಷಗಳಿಂದ ಬೀದಿ ಭಿಕ್ಷುಕರು ದಾರಿಹೋಕರಿಗೆ ಕಿರಿಕಿರಿ ಮಾಡುತ್ತಿರುತ್ತಾರೆ. ಸರ್ಕಾರವು ಭಿಕ್ಷಾಟನೆಯನ್ನು ನಿಷೇಧಿಸಿದ್ದರೂ ಈ ಭಿಕ್ಷುಕರಿಂದ ಕಿರಿಕಿರಿ ಎನಿಸಿದೆ. ಈ ಸಂಬಂಧ ಬಸವನಗರ ಪೊಲೀಸ್ ಠಾಣೆಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಭಿಕ್ಷುಕರ ಪುನರ್ ವಸತಿ ಕೇಂದ್ರಗಳಲ್ಲಿ ಅವರಿಗೆ ಅನ್ನ, ಆಶ್ರಯ ಮತ್ತು ಭವಿಷ್ಯ ನೀಡಿದಂತೆ ಇಲ್ಲಿನ ಭಿಕ್ಷುಕರಿಗೆ ಪುನರ್ ವಸತಿ ಕಲ್ಪಿಸಬೇಕು. ಅಲ್ಲದೇ ಪಿಬಿ ರಸ್ತೆಯಲ್ಲಿರುವ ಶನೀಶ್ವರ ದೇವಸ್ಥಾನದ ಬಳಿ ಇರುವ ಭಿಕ್ಷುಕರನ್ನು ಖಾಯಂ ಆಗಿ ಆ ಸ್ಥಳಗಳಿಂದ ತೆರವುಗೊಳಿಸಬೇಕು.
-ಜೆ.ಎಸ್.ಚಂದ್ರನಾಥ, ನೀಲಾನಹಳ್ಳಿ.