ಯುಜಿಡಿ ಕೆಲಸದಡಿಯಲ್ಲಿ ಆದ ಮಳೆ ನೀರಿನ ಕಾಲುವೆ

ಯುಜಿಡಿ ಕೆಲಸದಡಿಯಲ್ಲಿ ಆದ ಮಳೆ ನೀರಿನ ಕಾಲುವೆ - Janathavaniಮಾನ್ಯರೇ, 

ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 1ನೇ ಮುಖ್ಯರಸ್ತೆಯಲ್ಲಿ ಆದ ಸ್ಮಾರ್ಟ್ ಸಿಟಿ ಯುಜಿಡಿ ಕೆಲಸದಡಿಯಲ್ಲಿ ಆದ ಮಳೆನೀರಿನ ಕಾಲುವೆ ಇದು.  ಆದರೆ ಇದರಲ್ಲಿ ಹೀಗೆ ಕೊಚ್ಚೆ ಹರಿಯುತ್ತಿದೆ.

ಸದ್ಯದಲ್ಲೇ ಕಾಂಕ್ರೀಟ್ ಬ್ಲಾಕು ಗಳನ್ನು ಹಾಕಿ ಮುಚ್ಚುವ ಈ ಕಾಲುವೆಯಲ್ಲಿ ಹರಿಯುವ ಕೊಚ್ಚೆಯು ಯಾರ ಕಣ್ಣಿಗೂ ಬೀಳದೆ ಕಾಲಾಂತರ ದಲ್ಲಿ ಸೋ ರಿಕೆಯಾಗಿ ಅಂತರ್ಜಲ ವನ್ನು ಸೇರಿ ವಿಷಮಯಗೊಳಿಸುತ್ತದೆ.

ಇದೇ ರಸ್ತೆಯಲ್ಲಿ ಪ್ರಧಾನಿಗಳ `ಸ್ವಚ್ಚ ಭಾರತ’ ಆಂದೋಲನಕ್ಕೆ ಬೆಂಬಲ ನೀಡಬೇಕಾಗಿರುವ ಬಿಜೆಪಿ ಪಕ್ಷದ ಕಾರ್ಪೊರೇಟರ್ ಇದ್ದಾರೆ. ಮತ್ತು ಇದೇ ರಸ್ತೆಯಲ್ಲಿಯೇ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯಾಲಯವೂ ಇದೆ. ಆಡಳಿತ ಮತ್ತು ವಿರೋಧ ಎರಡೂ ಪಕ್ಷದವರ ಬುಡದಲ್ಲೇ ಇಂತಹ ಪರಿಸರ ಮಾರಕ, ಭ್ರಷ್ಟ ಆಡಳಿತಶಾಹಿ ತಪ್ಪುಗಳು ನಡೆದರೂ ಕಾಣದ ಈ ಎರಡೂ ಪಕ್ಷಗಳು ಇನ್ಯಾವ ಕಾರಣಗಳನ್ನಿಟ್ಟುಕೊಂಡು ಜನಪರ ಹೋರಾಟಗಳನ್ನು ನಡೆಸುವರೋ? 

ಇದು ಕೇವಲ `ಸ್ಮಾರ್ಟ್ ಸಿಟಿ’ ಅಡಿಯಲ್ಲಿ ಬರುವ ಒಂದು ರಸ್ತೆಯ ಮಳೆಗಾಲುವೆ ಮಾಡುವ ಪರಿಸರ ಹಾನಿಯ ಕತೆಯಾದರೆ ನಗರ, ರಾಜ್ಯ, ದೇಶದಾದ್ಯಂತ ಸ್ಮಾರ್ಟ್ ಸಿಟಿ ಸ್ಕೀಮಿನಲ್ಲಿ ಆಡಳಿತ ಪಕ್ಷದ ಆಡಳಿತದಿಂದಾಗಿ ಆಗಬಹುದಾದ ನಾನ್-ಸ್ಮಾರ್ಟ್ ಬಗ್ಗೆ ಮಾತನಾಡಬೇಕಾದ ಕಾಂಗ್ರೆಸ್ ಪಕ್ಷ ಹೀಗೆ ಕಣ್ಣು ಮುಚ್ಚಿ ಕುಳಿತಿರುವ ಕಾರಣಕ್ಕೇ ಅದು ಇಂದಿನ ದುರ್ಗತಿಗೆ ಬಂದಿರುವುದು! ಇಂತಹ ತಾರ್ಕಿಕ ಕಾರಣಗಳಿಗೆ ಹೋರಾಡದೆ ಬರಿದೆ ಭಾವುಕ ಜೋಡೋ, ಬಾಡೋ, ತೋಡೋ ಮಾಡಿದರೆ ಸದ್ಗತಿಯಂತೂ ದೊರೆಯದು.

– ರವಿ ಹಂಜ್, ದಾವಣಗೆರೆ.

error: Content is protected !!