ಹೆಲ್ಮೆಟ್ ಖರೀದಿಗೆ ಸಾಲ ನೀಡಿ..

ಮಾನ್ಯರೇ,

ಕೊರೊನಾ ಬಂದು ಇಡೀ ಜಗತ್ತಿನ ಆರ್ಥಿಕ ಸ್ಥಿತಿ ಸ್ತಬ್ಧವಾಗಿರುವ ಈ ಸಂದರ್ಭದಲ್ಲಿ ದಾವಣಗೆರೆ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರ ಬಳಿ ಇದ್ದ ಹೆಲ್ಮೆಟ್‌ಗಳನ್ನು ಕಿತ್ತುಕೊಂಡು ಐಎಸ್‌ಐ ಮಾರ್ಕಿನ ಹೆಲ್ಮೆಟ್‌ಗಳನ್ನೇ ಬಳಸಬೇಕೆಂದು ಸೂಚಿಸುತ್ತಿದ್ದಾರೆ.

ಹೆಚ್ಚು ಕಡಿಮೆ ಬದುಕುಗಳೇ ಬರ್ಬರವಾಗಿರುವ ಈ ಸಂದರ್ಭದಲ್ಲಿ ರೀತಿ-ನಿಯಮಗಳನ್ನು ಕಡ್ಡಾಯಗೊಳಿಸುವುದು ಸಮಂಜಸವಲ್ಲ. ಒಂದು ವೇಳೆ ನಿಜವಾಗಿಯೂ ಇಂತಹ ನಿಯಮವನ್ನು ಪಾಲಿಸಬೇಕೆಂಬುದೇ ಆದರೆ ಐಎಸ್‌ಐ ಮಾರ್ಕಿನ ಹೆಲ್ಮೆಟ್ ಖರೀದಿಸಲು ದ್ವಿಚಕ್ರ ವಾಹನ ಸವಾರರಿಗೆ ವಿಶೇಷ ಸಾಲ ನೀಡಿ ಆನಂತರವೂ ಹೆಲ್ಮೆಟ್ ಖರೀದಿಸದವರಿಗೆ ದಂಡ ವಿಧಿಸಿ ಎನ್ನುವುದು ನನ್ನ ಒತ್ತಾಯ

– ಕೆ. ಅಂಜುಕುಮಾರ್, ಸಾಮಾಜಿಕ ಕಾರ್ಯಕರ್ತರು, ದಾವಣಗೆರೆ.

error: Content is protected !!