ಜಿಲ್ಲೆಯಲ್ಲಿ ಡಿಸೆಂಬರ್‌ವರೆಗೆ ಫುಲ್‌ ಹೆಲ್ಮೆಟ್‌ ಧರಿಸಲು ವಿನಾಯಿತಿ ನೀಡಿ

ಮಾನ್ಯರೇ,

ನಗರದಲ್ಲಿ ಅರ್ಧ ಹೆಲ್ಮೆಟ್‌ ನಿಷೇಧಿಸಿದ್ದೇವೆ ಎಂದು ಮತ್ತು ಐಎಸ್ಐ ಮುದ್ರಿತ ಹೆಲ್ಮೆಟ್‌ ಧರಿಸುವಂತೆ ಜಾಗೃತಿ ಮೂಡಿಸುತ್ತಿರುವ ಕಾರ್ಯ ಅಭಿನಂದನಾರ್ಹ. ಆದರೆ ಫುಲ್‌ ಹೆಲ್ಮೆಟ್‌ ಧರಿಸಿ, ಮಾಸ್ಕ್‌ ಧರಿಸುವುದರಿಂದ ಮನುಷ್ಯನ ಉಸಿರಾಟದಲ್ಲಿ ಏರಿಳಿತ ಆಗುವ ಸಂಭವ ಹೆಚ್ಚಾಗಿದೆ. ಆದಕಾರಣ ರಾಜ್ಯ ಸರ್ಕಾರ ಈಗಾಗಲೇ ಮಾಸ್ಕನ್ನು ಡಿಸೆಂಬರ್‌ ಕೊನೆಯವರೆಗೂ ಮತ್ತು ಮುಂದಿನ ಆದೇಶದವರೆಗೆ ಕಡ್ಡಾಯಗೊಳಿಸಿದೆ ಹಾಗೂ ಸಾರ್ವಜನಿಕರು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿ ಈಗ ಚೇತರಿಕೆ ಕಂಡುಕೊಳ್ಳುತ್ತಿರುವ ಕಾರಣಕ್ಕಾಗಿ ಕೆಲ ಜಿಲ್ಲೆಗಳಲ್ಲಿ ಹೆಲ್ಮೆಟ್‌ ಕಡ್ಡಾಯಗೊಳಿಸಿಲ್ಲ. ಆದ್ದರಿಂದ ಜಿಲ್ಲಾ ರಕ್ಷಣಾಧಿಕಾರಿಗಳು ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ಡಿಸೆಂಬರ್‌ವರೆಗೆ ಅಂದರೆ ಮಾಸ್ಕ್‌ ಕಡ್ಡಾಯವಿರುವವರೆಗೆ ಫುಲ್‌ ಹೆಲ್ಮೆಟ್‌ ಧರಿಸುವುದರ ಬಗ್ಗೆ ರಿಯಾಯಿತಿ ನೀಡಬೇಕೆಂದು ವಿನಂತಿ.

– ಹೆಚ್‌. ದಿವಾಕರ್‌, ಎ.ಸಿ. ರಾಘವೇಂದ್ರ, ಎ.ಎಸ್‌. ಮಂಜುನಾಥ, ವಕೀಲರು, ದಾವಣಗೆರೆ.

error: Content is protected !!