ಮಾನ್ಯರೇ,
ಮನೆಗೆ ತಳಪಾಯ ಎಷ್ಟು ಮುಖ್ಯವೋ, ಪ್ರಾಥಮಿಕ ಶಿಕ್ಷಣ ಮಕ್ಕಳಿಗೆ ಅಷ್ಟೇ ಮುಖ್ಯ. ಹಾಗಾಗಿ ಸರ್ಕಾರ ತಡಮಾಡದೆ ಆಗಸ್ಟ್ 1 ರಿಂದ ಎಲ್ಲಾ ಶಾಲೆಗಳನ್ನು ಪ್ರಾರಂಭಿಸಬೇಕು.
ಚಿಕ್ಕಮಕ್ಕಳು ಬೀದಿ ಬದಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಓದು ಬರಹ ಸಂಪೂರ್ಣ ನಿಂತಿದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಮಕ್ಕಳು ಶಾಲೆಗಳನ್ನು ಮರೆತಿದ್ದಾರೆ. ಜೊತೆಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಬಳವಿಲ್ಲದೆ ಒದ್ದಾಡುವ ಪರಿಸ್ಥಿತಿ ಉಂಟಾಗಿದೆ. ಸರ್ಕಾರ ಇವರ ಬಗ್ಗೆ ಗಮನ ಹರಿಸಬೇಕಿದೆ.
– ಕೆ.ಎನ್. ಸ್ವಾಮಿ, ಶ್ರೀ ಸಿದ್ಧಗಂಗಾ ಮಕ್ಕಳ ಲೋಕ, ದಾವಣಗೆರೆ.