ಮಾನ್ಯರೇ,
ದಾವಣಗೆರೆ ನಗರ ಸ್ಮಾರ್ಟ್‌ಸಿಟಿ ಆದ ಮೇಲೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಜೊತೆ ಜೊತೆಗೆ ಹೆಚ್ಚು ಹೆಚ್ಚು ಸಮಸ್ಯೆಗಳು ನಗರದ ಜನತೆಯನ್ನು ಕಾಡುತ್ತಿವೆ.
ಪ್ರಮುಖ ಸಮಸ್ಯೆಯೆಂದರೆ ಎಲ್ಲಾ ರಸ್ತೆಗಳಲ್ಲಿ ವಾಹನ ಸವಾರರಿಗೆ ಕಿರಿ ಕಿರಿಯಾಗುವಂತೆ ನಾಯಿ, ಹಂದಿ, ದನಗಳ ಕಾಟ ಜಾಸ್ತಿಯಾಗಿದೆ. ಅಡ್ಡಾದಿಡ್ಡಿ ಬರುವ ಈ ಪ್ರಾಣಿಗಳಿಂದ ಅನೇಕ ಅಪಘಾತಗಳು ಸಂಭವಿಸುತ್ತಲೇ ಇವೆ. ಜಿಲ್ಲಾಡಳಿತ ಮತ್ತು ಪಾಲಿಕೆ ಈ ಕುರಿತು ಆಲೋಚಿಸಬೇಕಿದೆ. ಪ್ರತ್ಯೇಕ ದೊಡ್ಡಿಗಳನ್ನು ನಿರ್ಮಿಸಿ ಈ ಪ್ರಾಣಿಗಳನ್ನು ಹಿಡಿದು ಒಂದೆಡೆ ಕಲೆ ಹಾಕಿ ನಿಯಂತ್ರಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿ ವರ್ಗ ಕ್ರಮ ಕೈಗೊಳ್ಳುವಂತೆ ನಮ್ಮ ಮನವಿ.
– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.