ಮಾನ್ಯರೇ,
ಹೊಸ ಹೊಸ ಕಾನೂನನ್ನು ಜಾರಿಗೆ ತರುತ್ತಿರುವ ಸರ್ಕಾರಗಳಿಗೆ ಮಾನವೀಯತೆ ಅಥವಾ ಜನರ ಈಗಿನ ಪರಿಸ್ಥಿತಿಯ ಅರಿವಾದರೂ ಇದೆಯೇ?? ನೀವು ಕಾನೂನು ಮಾಡುವಾಗ ಅದರ ಆಗು-ಹೋಗುಗಳ ಬಗ್ಗೆ ಯೋಚಿಸಿ ಸಹಿ ಮಾಡುವಿರಾ ತಾನೇ ?
ಎಸಿ ರೂಮಿನಲ್ಲಿ ಕುಳಿತು ಅಧಿಕಾರ ಮಾಡುವ ಬದಲು, ಜನಸಾಮಾನ್ಯರ ಜೊತೆ ಬೆರೆಯಿರಿ, ಜನಸಾಮಾನ್ಯರ ಕಷ್ಟಗಳನ್ನು ಕಣ್ಣಾರೆ ನೋಡಿ ನಂತರ ದಂಡ ಹಾಕುವ ಬಗ್ಗೆ ಯೋಚನೆ ಮಾಡುವಿರಂತೆ… ಒಂದು ಕುಟುಂಬದ ಆದಾಯ ಎಷ್ಟಿದೆ ಎಂಬ ಮಾಹಿತಿ ನಿಮ್ಮ ಬಳಿ ಇದೆಯೇ ??? ಒಬ್ಬ ವ್ಯಕ್ತಿ ಮಾಸ್ಕ್ ಹಾಕಿಲ್ಲ ಎಂದರೆ ಸಾವಿರ ರೂ. ದಂಡ ಕೇಳುವ ನೀವು ಅವನ ತಿಂಗಳ ಆದಾಯ ಎಷ್ಟು ಎಂದು ತಿಳಿದುಕೊಂಡಿದ್ದೀರಾ? ನಿಮ್ಮ ಈ ಹುಚ್ಚು ಕಾನೂನುಗಳಿಂದ ಜನ ತಾಳ್ಮೆ ಕಳೆದುಕೊಂಡರೆ, ಅದರ ಪರಿಣಾಮವನ್ನು ನೀವೇ ಎದುರಿಸಬೇಕಾಗುತ್ತದೆ. ಆದ್ದರಿಂದ ಕಾನೂನು ಮಾಡುವ ಮೊದಲು ಯೋಚನೆ ಮಾಡಿ.
– ಕೆ.ಎಲ್.ಹರೀಶ್, ಬಸಾಪುರ