ಕಾಮನಬಿಲ್ಲು ಕಾರ್ಯಕ್ರಮ ಮರು ಪ್ರಸಾರವಾಗಲಿ

ಮಾನ್ಯರೇ,

ದಾವಣಗೆರೆ ಎಫ್‌ಎಂ ಮರುಪ್ರಸಾರ ಕೇಂದ್ರದಿಂದ ಕನ್ನಡ ಕಾಮನಬಿಲ್ಲು  ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದು, ಶ್ರೋತೃಗಳು ಬೆಳಗಿನಿಂದ ಮಧ್ಯರಾತ್ರಿವರೆಗೂ ಸುಮಧುರ ಗೀತೆಗಳು ಹಾಗೂ ಇತರೆ ಕಾರ್ಯಕ್ರಮಗಳನ್ನು ಆಸ್ವಾದಿಸುತ್ತಾ, ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ, ಇತ್ತೀಚೆಗೆ ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿದೆ. ದಯಮಾಡಿ ಮೊದಲಿನಂತೆಯೇ ನಮ್ಮ ಅಚ್ಚುಮೆಚ್ಚಿನ ಕನ್ನಡ ಕಾಮನಬಿಲ್ಲಿನ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡಬೇಕಾಗಿ ಸಂಬಂಧಪಟ್ಟವರಲ್ಲಿ ಮನವಿ.

– ಬಾತಿ ಸದಾನಂದ, ದಾವಣಗೆರೆ.

error: Content is protected !!