ಮಾನ್ಯರೇ,
ಕೊರೊನಾ ಲಾಕ್‌ಡೌನ್‌ನಿಂದಾಗಿ ಮಕ್ಕಳು ಎರಡು ತಿಂಗಳಿನಿಂದ ಶಾಲೆಯ ಮುಖವನ್ನೇ ಕಂಡಿಲ್ಲದಂತಾಗಿದೆ.
ಬರೇ ಆಟ, ಗಲಾಟೆಯಲ್ಲಿಯೇ ಕಾಲ ಕಳೆಯುತ್ತಿದ್ದು, ತರಬೇತಿ ಪಡೆದ ಶಿಕ್ಷಕರು ಸಾಕಷ್ಟಿದ್ದು, ಅವರವರ ಮನೆಯಲ್ಲಿಯೇ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಬೇಕಿದೆ. ಶಿಕ್ಷಕರಿಗೆ 5,000 ರೂಪಾಯಿ ನೀಡಿದರೂ ಸಂತೋಷದಿಂದ ಮಾಡುತ್ತಾರೆ.
ಮಕ್ಕಳಿಗೆ ಬಾಲ್ಯ ಬಹಳ ಮುಖ್ಯ. ಒಂದೊಂದು ದಿನವೂ ವ್ಯರ್ಥವಾಗಬಾರದು. ಹಿಂದೆ ರಾತ್ರಿ ಶಾಲೆಗಳು ವಯಸ್ಕರಿಗೆ ನಡೆಯುತ್ತಿದ್ದಂತೆ. ಕೊರೊನಾ ಹತೋಟಿಗೆ ಬರುವವರೆಗೂ ಓಣಿಗೊಂದು ಗೃಹಶಾಲೆ ತೆರೆಯಲು ಮನವಿ ಮಾಡುತ್ತೇನೆ.
– ಕೆ.ಎನ್. ಸ್ವಾಮಿ, ದಾವಣಗೆರೆ.