ಮಾನ್ಯರೇ,
ದೇಶಾದ್ಯಂತ ಲಾಕ್‌ಡೌನ್ ಇರುವ ಹಿನ್ನೆಲೆ ಯಲ್ಲಿ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಬೆಲೆ ಹೇಳುತ್ತಿದ್ದಾರೆ.
ಯಾವ ಸಿದ್ದತೆ ಹಾಗೂ ಮುಂಜಾಗ್ರತೆ ಇಲ್ಲದೇ ಏಕಾಏಕಿ ಎಲ್ಲವೂ ಲಾಕ್‌ಡೌನ್ ಆಗಿರುವುದರಿಂದ ಜನ ಸಾಮಾನ್ಯರು ಕನಿಷ್ಟ ದುಡಿಮೆ ಇಲ್ಲದೆ ಪರದಾಡುತ್ತಿರುವುದು ಎಲ್ಲಾ ಕಡೆ ಸಾಮಾನ್ಯವಾಗಿದೆ..! ದಿನ ಬಳಕೆಯ ಅಗತ್ಯ ವಸ್ತುಗಳಾದ ದಿನಸಿ ಬೆಲೆ ಹಾಗೂ ತರಕಾರಿ ಬೆಲೆಯಂತೂ ಒಂದಕ್ಕೆ ಎರಡಾಗಿ ಗಗನಕ್ಕೇರಿ ಜನರ ಬದುಕು ನರಕವಾಗಿದೆ.
ಲಾಕ್‌ಡೌನ್ ಜಾರಿಯಾಗುವ ಮೊದಲು ಇದ್ದ ದಿನಸಿ ಪದಾರ್ಥಗಳಿಗೂ ಲಾಕ್‌ಡೌನ್ ಆದ ನಂತರದ ದಿನಸಿ ಬೆಲೆಗೂ ಅಜಗಜಾಂತರ ವ್ಯತ್ಯಾಸವಿದೆ. ಬೆಲ್ಲ, ಸಕ್ಕರೆ, ಬೇಳೆ ಕಾಳುಗಳು, ಎಣ್ಣೆಯಂತಹ ದಿನ ಬಳಕೆಯ ಸಾಮಾನ್ಯ ವಸ್ತುಗಳ ಬೆಲೆ ಕೈಗೆ ಎಟುಕದಂತೆ ಏರಿಕೆಯಾಗುತ್ತಲೇ ಇದೆ. ಇದರಿಂದಾಗಿ ಸಾಮಾನ್ಯರ ಪರಿಸ್ಥಿತಿ ಹೇಳಲು ಅಸಾಧ್ಯವಾಗಿದೆ.
ವ್ಯಾಪಾರಸ್ಥರು ದಿನಕ್ಕೊಂದು ಬೆಲೆ ಹೇಳು ತ್ತಾರೆ. ಹೆಚ್ಚು ಬೆಲೆಗೆ ಮಾರಾಟ ಮಾಡುವುದನ್ನು ಪ್ರಶ್ನಿಸಿದರೆ ಬೇಕಾದರೆ ತಗೊಳ್ಳಿ ಇಲ್ಲ ಬಿಡಿ ಎಂದು ಹೇಳುವ ವರ್ತಕರು ಒಂದು ಕಡೆಯಾ ದರೆ, ಇನ್ನು ಕೆಲವರು ಬಹುತೇಕ ದಿನಸಿ ಪದಾ ರ್ಥಗಳು ನಾವು ಬೇರೆ ಜಿಲ್ಲೆಗಳಿಂದ ಖರೀದಿ ಮಾಡುತ್ತೇವೆ. ಪೂರೈಕೆ ಕೊರತೆ ನಮಗಿದೆ ಹಾಗಾಗಿ ಬೆಲೆ ಏರಿಕೆ ಅನಿವಾರ್ಯ ಎನ್ನುತ್ತಾರೆ.
ದಿನಸಿ ವರ್ತಕರ ಈ ನಡೆಗೆ ಜಿಲ್ಲಾಡಳಿತ ಎಚ್ಚೆತ್ತು ದಿನಸಿ ವರ್ತಕರ ಸಂಘಟನೆಗಳ ಗಮ ನಕ್ಕೆ ತರಬೇಕು. ಪ್ರತಿ ದಿನಸಿ ಚಿಲ್ಲರೆ ಅಂಗಡಿಗಳ ಮುಂಗಟ್ಟಿನಲ್ಲಿ ಪ್ರತಿ ದಿನಸಿಯ ನ್ಯಾಯವಾದ ಬೆಲೆಯ ಪಟ್ಟಿಯನ್ನು ಪ್ರಕಟಿಸಬೇಕು. ಆಯಾ ತಾಲ್ಲೂಕು ತಹಶೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿ ಕಾರಿಗಳು ಆದೇಶವನ್ನು ಹೊರಡಿಸಬೇಕು.
ಬೆಲೆಗಳ ಬಗ್ಗೆ ವರ್ತಕರಿಗೆ ತಿಳುವಳಿಕೆ ನೀಡಬೇಕು. ಆಹಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಯಾವುದೇ ವಿಚಾರಣೆ ಮಾಡದೇ ಇರುವುದು ಇಂತಹ ಸಮಸ್ಯೆಗೆ ಕಾರಣವಾಗಿ ರಲೂಬಹುದು ಎಂಬುದು ಸಾರ್ವಜನಿಕರು ಅಭಿಪ್ರಾಯವಾಗಿದೆ. ಜನಸಾಮಾನ್ಯರ ಬದುಕು ಈ ಲಾಕ್‌ಡೌನ್‌ನಿಂದ ಉರಿದು ಬೂದಿಯಾಗುವ ಮುನ್ನ ಅಧಿಕಾರಿಗಳು ಗಮನ ಹರಿಸಿದರೆ ಸಾಮಾನ್ಯರ ಬದುಕು ಒಂದಷ್ಟಾದರೂ ಸುಧಾರಿಸಬಹುದು.
– ಕೆ.ಜಿ. ಸರೋಜಾ ನಾಗರಾಜ್, ಪಾಂಡೋಮಟ್ಟಿ.