ಮಾನ್ಯರೇ,
ರಾಜ್ಯ ಆರ್ಥಿಕ ಸಂಕಷ್ಟದಲ್ಲಿದ್ದು, ನಾನಾ ಮಾರ್ಗಗಳನ್ನು ಹುಡು ಕುತ್ತಿದೆ.ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಎರಡು ಸಲಹೆಗಳು. ರಾಜ್ಯದ ಸಾವಿರಾರು ಸರ್ಕಾರಿ ಶಾಲೆ, ಪದವಿಪೂರ್ವ, ಪದವಿ ಕಾಲೇಜುಗಳಲ್ಲಿ ಈ ವರೆಗೂ ಸಂಚಿತಗೊಂಡು ಬಳಸಲಾರದ ಹಣ ಬ್ಯಾಂಕ್ ಖಾತೆಗಳಲ್ಲಿ ಇದೆ. ಇದನ್ನು ಅವರಿಗೆ ಬಳಸುವ ಅಧಿಕಾರ ಇಲ್ಲ. ಆಯಾ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ನಿಗದಿತ ಪ್ರಮಾಣ ದಲ್ಲಿ ಮಾತ್ರ ಬಳಸಲಾಗುತ್ತದೆ. ಇದನ್ನು ಬಳಸಲು ಸರ್ಕಾರದ ಅನು ಮತಿ ಬೇಕಾಗುತ್ತದೆ. ಸಂಚಿತವಾಗಿ ವೃಥಾ ಇರುವ ಹಣವನ್ನು ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಲು ಸುತ್ತೋಲೆ ಹೊರಡಿಸಿದರೆ, ಸಂಕಷ್ಟಕ್ಕೆ ಸಹಾಯವಾಗುತ್ತದೆ. ಇದು ಕೋಟಿಗಟ್ಟಲೆ ಹಣವಾಗುತ್ತದೆ. ಈ ಹಿಂದೆ ಹೀಗೆ ಮಾಡಿದ ಉದಾಹರಣೆಗಳಿವೆ.
ಕರ್ನಾಟಕದಲ್ಲಿ ಕೆಲಸ ನಿರ್ವಹಿಸುವ ನೌಕರರ ವೃತ್ತಿ ತೆರಿಗೆ ಪ್ರತಿ ತಿಂಗಳು ಗರಿಷ್ಠ 200 ರೂ. ಇದೆ. ಇದನ್ನು 500 ರೂ. ಗಳ ವರೆಗೆ ಹೆಚ್ಚಿಸಬಹುದು. ಸರ್ಕಾರಕ್ಕೆ ಪ್ರತಿ ಮಾಹೆ ಆದಾಯ ಹೆಚ್ಚುತ್ತದೆ. ಅನುಸರಿಸಲು ಮನವಿ.
– ಎಸ್. ಗೋಪಾಲದಾಸ್, ಉಪನ್ಯಾಸಕರು, ಸರ್ಕಾರಿ ಪ.ಪೂ ಕಾಲೇಜು, ದಾವಣಗೆರೆ.