ಮಾನ್ಯರೇ,
ಸರ್ಕಾರ ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿ, ತೆರಿಗೆದಾರರಿಗೆ ತೊಂದರೆಯಾಗದಂತೆ ನಿಗದಿತ ನಮೂನೆ ಗಳನ್ನು ಸಲ್ಲಿಸಲು ಮತ್ತು ತತ್ಸಂಬಂಧ ತೆರಿಗೆಯನ್ನು ಪಾವತಿ ಸಲು ಹೆಚ್ಚುವರಿ ಕಾಲಾವಕಾಶ ನೀಡಿರುತ್ತಾರೆ. ಆದರೆ, ಸರ್ಕಾರವೂ ಅಧಿಕ ಹಣ ಖರ್ಚು ಮಾಡಬೇಕಾಗಿರುವು ದರಿಂದ ಹಣಕಾಸು ಹೊಂದಾಣಿಕೆಗೆ ತೊಂದರೆ ಉಂಟಾ ಗುತ್ತದೆ. ಭಾರತದ ಹೆಮ್ಮೆಯ ಪ್ರಜೆಗಳಾಗಿ ತಾಯ್ನಾಡಿನ ಸೇವೆ ಮಾಡುವುದು, ಸಹಕಾರ ನೀಡುವುದು ಆದ್ಯ ಕರ್ತವ್ಯ. ಆದ್ದರಿಂದ ಕರ ದಾತರಲ್ಲಿ ಒಂದು ಮನವಿ. ಎಲ್ಲ ರಿಗೂ ಅಲ್ಲದಿದ್ದರೂ ಕೆಲವರಿಗೆ ತೆರಿಗೆ ಪಾವತಿಸಲು ಕಷ್ಟ ಪಟ್ಟು ಹೊಂದಿಸಲು ಸಾಧ್ಯವಿದೆ. ಅಂತಹ ತೆರಿಗೆ ಪಾವತಿ ದಾರರು ದೇಶದ ಹಿತದೃಷ್ಟಿಯಿಂದ ತೆರಿಗೆ ಪಾವತಿಸಿ.
ವೃತ್ತಿ ತೆರಿಗೆ ರಾಜ್ಯ ಸರ್ಕಾರಕ್ಕೆ ನೇರವಾಗಿ ಜಮೆಯಾಗುತ್ತದೆ ಮತ್ತು ಜಿಎಸ್‌ಟಿ ಮತ್ತು ಮುಂಗಡ ಆದಾಯ ತೆರಿಗೆ ಪಾವತಿಸುವುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಹಕಾರಿಯಾಗುತ್ತದೆ.
ನಮ್ಮ ಮನವಿಯನ್ನು ಹೃತ್ಪೂರ್ವಕವಾಗಿ ಅಂಗೀಕರಿಸಿ, ನಮ್ಮ ಕೆಲ ಕಕ್ಷಿದಾರರು ತೆರಿಗೆ ಪಾವತಿ ಮಾಡಿರುತ್ತಾರೆ. ಇವರಿಗೆ ಧನ್ಯವಾದಗಳು. ಎಲ್ಲಾ ಕರದಾತರು ತಮಗೆ ಸಾಧ್ಯವಾದರೆ, ತೆರಿಗೆಗಳನ್ನು ಪಾವತಿಸಿ ಉತ್ತಮ ಸಹಕಾರಿ ಪ್ರಜೆಗಳಾಗೋಣ.
-ವಿ.ಎಸ್.ಅರುಣಾಚಲ ಶೆಟ್ಟಿ, ತೆರಿಗೆ ವಕೀಲರು. ಜಿ.ಎಂ.ವಿಜಯಕುಮಾರ್, ತೆರಿಗೆ ಸಲಹೆದಾರರು.