ಮಾನ್ಯರೇ,
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗಣಿತ ಶಿಕ್ಷಕರಾದ ನಾವು ಇದುವರೆಗೂ ಬಹು ಆಯ್ಕೆ ಪ್ರಶ್ನೆಗಳಿಗೆ ಹೆಚ್ಚಿನ ಒತ್ತು ಕೊಟ್ಟಿರಲಿಲ್ಲ. ಯಾಕೆಂದರೆ ಪ್ರಸಕ್ತ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕೇವಲ 8 ಬಹು ಆಯ್ಕೆಯ ಪ್ರಶ್ನೆಗಳು ಇತ್ತು. ಆದರೆ, ಈಗ ಬದಲಾದ ಪ್ರಶ್ನೆಪತ್ರಿಕೆ ಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳೇ ಇರುವುದರಿಂದ ವಿದ್ಯಾರ್ಥಿಗಳಿಗೆ ಉತ್ತರಿಸಲು ಕಷ್ಟವಾಗಬಹುದು. ದೀರ್ಘ ಉತ್ತರದ ಪ್ರಶ್ನೆಗಳಿಗೆ ಮಕ್ಕಳನ್ನು ಬಹಳವಾಗಿ ತಯಾರಿ ಮಾಡಿದ್ದೆವು. ಇದ್ದಕ್ಕಿದ್ದಂತೆ ಆದ ಬದಲಾವಣೆಗೆ ಹೊಂದಿಕೊಂಡು ಮತ್ತೆ ಮಕ್ಕಳನ್ನು ತಯಾರುಗೊ ಳಿಸಬೇಕು. ಅದೂ ಅವರೊಂದಿಗೆ ನೇರ ಸಂಪರ್ಕ ಇಲ್ಲದೇ ಇರುವ ಸವಾಲು ಮುಂದಿದೆ. ಎದೆಗುಂದದೆ ಸ್ವೀಕರಿಸಬೇಕು.
– ಮಂಜುಳಾ ಪ್ರಸಾದ್, ಕೆಪಿಎಸ್, ತ್ಯಾವಣಿಗೆ