ಬ್ಯಾಂಕ್‌/ಎಂಟಿಎಂಗಳಲ್ಲಿ ಬಿಡಿ ನೋಟು ಸಿಗಲಿ

ಮಾನ್ಯರೇ,

ಕೊರೊನಾ ಸೋಂಕನ್ನು ತಡೆಯುವ ನಿಟ್ಟಿನಲ್ಲಿ  ಜೂನ್ 5ರ ವರೆಗೆ ಬ್ಯಾಂಕಿನ ಸಮಯವನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬದಲಾವಣೆ ಮಾಡುವುದರಿಂದ  (ತಿಂಗಳ ಮೊದಲ ವಾರದ ಜನದಟ್ಟನೆ ತಪ್ಪಿಸಲು) ಗ್ರಾಹಕರಿಗೆ ಅನುಕೂಲವಾಗುವುದು. 

ಸಾಮಾನ್ಯವಾಗಿ ತಮ್ಮ ವೇತನ, ನಿವೃತ್ತಿ ವೇತನ ಇಲ್ಲವೇ ಠೇವಣಿಗಳ ಬಡ್ಡಿಯನ್ನು ಪಡೆದು ಆ ತಿಂಗಳ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲಾಗಲೀ, ಮನೆಯ ಅಂಗಳಕ್ಕೆ ಬರುವ ತರಕಾರಿ ಕೊಳ್ಳಲು ಚಿಲ್ಲರೆಯ ಅವಶ್ಯಕತೆ ಇದ್ದು,  ಐದು ನೂರಾರು ರೂಪಾಯಿ ಮೌಲ್ಯದ ನೋಟುಗಳ ಬದಲಾಗಿ ನೂರಿನ್ನೂರು ಮೌಲ್ಯದ ನೋಟುಗಳನ್ನು ಬ್ಯಾಂಕಿನವರೂ ಗ್ರಾಹಕರಿಗೆ ವಿತರಿಸುವಂತಾದರೆ ಸೂಕ್ತ. 

ಬ್ಯಾಂಕಿನ ಎಟಿಎಂಗಳಲ್ಲೂ ಐದು ನೂರಾರು ರೂಪಾಯಿ ಮೌಲ್ಯದ ನೋಟುಗಳೇ ಹೆಚ್ಚಾಗಿ ಬರುತ್ತಿವೆ. ಚಿಲ್ಲರೆ ನೋಟುಗಳಿ ಗೆಂದು ಬ್ಯಾಂಕಿಗೆ ಬರುವುದು, ಇಲ್ಲವೇ ಪೆಟ್ರೋಲ್ ಬಂಕಿಗೆ ಹೋಗುವುದನ್ನು ತಪ್ಪಿಸಬಹುದು. ಕೆಲವೊಮ್ಮೆ ಚಿಲ್ಲರೆ ನೋಟಿ ಗೆಂದು ಅಲ್ಲಿ,ಇಲ್ಲಿ ಹೋಗಿ ಕೊರೊನಾ ಸೋಂಕನ್ನು ಅಂಟಿಸಿಕೊಳ್ಳುವ ಬದಲು, ಬ್ಯಾಂಕಿನವರು ಸ್ವಲ್ಪಮಟ್ಟಿಗೆ ಬಿಡಿ ನೋಟುಗಳನ್ನು ನೀಡಿದರೆ ಸೋಂಕು ಹರಡುವುದು ತಡೆಯಲು ಸಾಧ್ಯ ಅಲ್ಲವೇ…!

– ರಘುನಾಥರಾವ್ ತಾಪ್ಸೆ, ದಾವಣಗೆರೆ.

error: Content is protected !!