ಹೊಟ್ಟೆಗೆ ಹಿಟ್ಟಿಲ್ಲದಾಗ ಸಹಕಾರಿಗಳಿಗೆ ದಾನದ ಜುಟ್ಟು ಬೇಕೇ ?

ಮಾನ್ಯರೇ,

ಜಿಲ್ಲಾ ಸಹಕಾರ ಬ್ಯಾಂಕುಗಳು ಜಿಲ್ಲಾಡಳಿತಕ್ಕೆ 30 ಲಕ್ಷ ರೂ.ಗಳ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲು ದಾನ ನೀಡಿವೆ ಎಂಬ ಸುದ್ದಿ ವರದಿಯಾಗಿದೆ. ಕೊರೊನಾದ ಸಂದರ್ಭದಲ್ಲಿ ಇಂತಹ ಕ್ರಮ ಒಳ್ಳೆಯದೇ. ಆದರೆ, ಬ್ಯಾಂಕುಗಳು ತಮ್ಮ ಗ್ರಾಹಕರ, ಠೇವಣಿದಾರರ ಹಾಗೂ ಸಾಲಗಾರರ ಹಿತವನ್ನೂ ಪರಿಗಣಿಸಬೇಕಲ್ಲವೇ?

ಕೊರೊನಾ ಭವಿಷ್ಯದ ಬಗ್ಗೆ ಆತಂಕ ತಂದಿದೆ. ನಾಳೆ ಎನ್.ಪಿ.ಎ. ಎಷ್ಟಾಗಲಿದೆ? ಸಾಲ ವಸೂಲಾತಿ ಹೇಗಿರಲಿದೆ? ಎಂಬೆಲ್ಲಾ ಪ್ರಶ್ನೆಗಳಿವೆ. ಒಂದು ಅಲೆಯದ್ದು ಎಂದುಕೊಳ್ಳಲಾದ ಕೊರೊನಾ, ಹಲವು ಅಲೆಯದ್ದೆಂದು ಸಾಬೀತಾಗಿದೆ. ಇಷ್ಟೆಲ್ಲ ಅಲೆಗಳನ್ನು ಎದುರಿಸಲು ಬ್ಯಾಂಕುಗಳು ಸಿದ್ಧವಾಗಬೇಕಿದೆ.

ಸರ್ಕಾರದ ಬಳಿ ಸಾವಿರಾರು ಕೋಟಿ ರೂ.ಗಳ ಹಣವಿದೆ. ಸಹಕಾರ ಬ್ಯಾಂಕುಗಳಲ್ಲಿ ಎಷ್ಟು ಹಣವಿದೆ? ನಾಳೆ ಕರಾಳ ಸಂಕಷ್ಟದ ಅಲೆ ಎದುರಾದರೆ ಬ್ಯಾಂಕುಗಳಿಗೆ ಯಾರಾದರೂ ನೆರವಾಗುತ್ತಾರೆಯೇ? ಈಗಾಗಲೇ ಸರ್ಕಾರ ಸಹಕಾರ ಬ್ಯಾಂಕುಗಳ ಲಾಭದ ದೊಡ್ಡ ಪ್ರಮಾಣವನ್ನು ತೆರಿಗೆಯಾಗಿ ಪಡೆಯುತ್ತಿದೆ. ರಿಸರ್ವ್ ಬ್ಯಾಂಕ್ ಹೊಸ ಹೊಸ ನಿಯಮಗಳನ್ನು ರೂಪಿಸಿ, ಸಹಕಾರ ಬ್ಯಾಂಕುಗಳನ್ನೆಲ್ಲ ವಾಣಿಜ್ಯ ಬ್ಯಾಂಕುಗಳಾಗಿ ಪರಿವರ್ತಿಸುವ ಬಗ್ಗೆಯೂ ಯೋಜಿಸುತ್ತಿರುವ ವರದಿಗ ಳಿವೆ. ಅದಕ್ಕೆಲ್ಲಾ ಬ್ಯಾಂಕುಗಳು ಒಗ್ಗಿಕೊಳ್ಳುವ ಸವಾಲಿದೆ.

ಅಷ್ಟಕ್ಕೂ ಕೋವಿಡ್‌ಗಾಗಿ ಹಣ ಹೊಂದಿಸಬೇಕು ಎಂದರೆ ನಗರದಲ್ಲಿ ಬೇಕಾದಷ್ಟು ದಾರಿಗಳಿವೆ. ಸ್ಮಾರ್ಟ್ ಸಿಟಿಯ ನೂರಾರು ಕೋಟಿ ರೂ. ಹಣ ಬಳಕೆಯಾಗದೇ ಉಳಿದಿದೆ. ನಗರದ ಸೌಂದರ್ಯೀಕರಣ, ಡಿಜಿಟಲ್ ಬೋರ್ಡ್, ಸ್ಮಾರ್ಟ್ ಟವರ್… ಹೀಗೆ ಹತ್ತಾರು ಯೋಜನೆಗಳಿಗೆ ಲಕ್ಷಾಂತರ ಹಣ ಬಳಸುತ್ತಿದೆ. ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಹಾಗೂ ಆರೋಗ್ಯಕ್ಕಾಗಿ ಹಣ ಕೇಳಿದರೆ ಸ್ಮಾರ್ಟ್ ಸಿಟಿ ಉನ್ನತ ಅಧಿಕಾರಿಗಳು ನಿರಾಕರಿಸಲಾರರು ಎಂದು ಭಾವಿಸಬಹುದು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎ – ಕೇರ್ಸ್ ನಿಧಿಯ ಮೂಲಕ ಈಗಾಗಲೇ ಆಕ್ಸಿಜನ್‌ ಘಟಕಗಳಿಗೆ ಹಣ ಬಿಡುಗಡೆ ಮಾಡಿದ್ದಾರೆ. ದುರಂತವೆಂದರೆ, 162 ಘಟಕಗಳಿಗೆ ಹಣ ಬಿಡುಗಡೆಯಾಗಿದ್ದರೆ, ಕೇವಲ 33 ಇದುವರೆಗೂ ಸ್ಥಾಪನೆಯಾಗಿವೆ. ಪಿಎಂ ಕೇರ್ಸ್ ನಿಧಿಯ ಮೂಲಕ ಡಿ.ಆರ್.ಡಿ.ಒ. 500 ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಮುಂದಾಗಿರುವ ವರದಿಗಳಿವೆ. ಸರ್ಕಾರದ ಇನ್ನೂ ಹಲವು ನಿಧಿಗಳು ಆಕ್ಸಿಜನ್‌ ಘಟಕಕ್ಕೆ ಲಭ್ಯವಿರುವ ಬಗ್ಗೆ ಪರಿಶೀಲಿಸಬೇಕಿದೆ.

ಈ ಹಿಂದೆ ಸಹಕಾರಿ ಬ್ಯಾಂಕುಗಳು ರೈಲ್ವೆ ಗೇಟ್‌ ಸಮಸ್ಯೆ ಬಗೆಹರಿಸಲು ದೇಣಿಗೆ ಕೊಟ್ಟಿದ್ದವು. ಇತ್ತೀಚೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಕೊಟ್ಟಿದ್ದರು. ನಂತರ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ಕೊಟ್ಟಿದ್ದರು. ಈ ರೀತಿ ಎಲ್ಲ ಹಣ ಕೊಡುವುದಕ್ಕೆ ಷೇರುದಾರರ ಅನುಮತಿ ಪಡೆಯಲಾಗಿದೆಯೇ? ಆಡಳಿತ ಮಂಡಳಿಗಳು ತಮಗೆ ತಿಳಿದ ರೀತಿಯಲ್ಲಿ ಹಣ ಕೊಡಲು ಅಧಿಕಾರ ಹೊಂದಿವೆಯೇ?  

ಸರ್ಕಾರ ತುರ್ತಾಗಿ ಸಹಕಾರ ಬ್ಯಾಂಕುಗಳನ್ನು ಕೊರೊನಾ ಅಲೆಯ ಸಂದರ್ಭದಲ್ಲಿ ರಕ್ಷಿಸಲು ದೂರ ಗಾಮಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಸಾಲ ಪಡೆದು ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಗುರಿಯಾ ಗಿರುವವರಿಗೆ ಬಡ್ಡಿ ವಿನಾಯಿತಿ ನೀಡಬೇಕಿದೆ. ಮತ್ತೊಂ ದೆಡೆ ಠೇವಣಿ ಇರಿಸಿರುವ ಹಣಕ್ಕೆ ಬಡ್ಡಿ ಕಡಿಮೆ ಯಾಗುತ್ತಿದೆ. ಆ ಬಗ್ಗೆಯೂ ಯೋಚಿಸಬೇಕಿದೆ. ಅದೆಲ್ಲ ವನ್ನು ಬಿಟ್ಟು ಸಹಕಾರ ಬ್ಯಾಂಕುಗಳಿಂದಲೇ ದಾನ ಪಡೆ ಯುವುದು ಸರ್ಕಾರಕ್ಕೆ ಶೋಭೆ ತರುವುದಲ್ಲ, ಸಹಕಾರಿ ಬ್ಯಾಂಕುಗಳಿಗೂ ಇಂತಹ ಕೆಲಸಗಳ ಅಗತ್ಯವಿಲ್ಲ.


– ಜಿ.ಎನ್. ಕಾಮತ್‌, ದಾವಣಗೆರೆ.

error: Content is protected !!